ಬೆಳಗಾವಿ ನಗರ ಮತ್ತು ತಾಲೂಕಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ ಮತ್ತು ರೋಟರಿ ಕ್ಲಬ್ ಆಫ್ ವೇಣುಗ್ರಾಮನ ಸಂಯುಕ್ತಾಶ್ರಯದಲ್ಲಿ 185ನೇ ವಿಶ್ವ ಛಾಯಾಚಿತ್ರ ದಿನದ ನಿಮಿತ್ಯ ಉಚಿತ ನೇತ್ರ ಮತ್ತು ಕಿವಿಗಳ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಭಾನುವಾರದಂದು ಬೆಳಗಾವಿಯ ವಾಂಗ್ಮಯ ಚರ್ಚಾ ಮಂಡಳದ ಸಭಾಗೃಹದಲ್ಲಿ ಬೆಳಗಾವಿ ನಗರ ಮತ್ತು ತಾಲೂಕಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ ಮತ್ತು ರೋಟರಿ ಕ್ಲಬ್ ಆಫ್ ವೇಣುಗ್ರಾಮನ ಸಂಯುಕ್ತಾಶ್ರಯದಲ್ಲಿ 185ನೇ ವಿಶ್ವ ಛಾಯಾಚಿತ್ರ ದಿನದ ನಿಮಿತ್ಯ ಉಚಿತ ನೇತ್ರ ಮರ್ತು ಕಿವಿಗಳ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ರೋಟರಿ ಕ್ಲಬ್ ಆಫ್ ವೇಣುಗ್ರಾಮನ ಅಧ್ಯಕ್ಷ ವಿನಯಕುಮಾರ ಬಾಯಿಕಾಯಿ, ಸೆಕ್ರೆಟರಿ ಲತೇಶ್ ಪೋರವಾಲ್, ಬೆಳಗಾವಿ ನಗರ ಮತ್ತು ತಾಲೂಕಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ ಅಧ್ಯಕ್ಷ ಡಿ.ಬಿ ಪಾಟೀಲ, ಅಮೀತ್ ಪವಾರ್, ಬಾಳು ಸಾಂಗುಕರ, ಸಚೀನ ಗೋವೆಕರ ಇನ್ನುಳಿದ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ರೋಟರಿ ಕ್ಲಬ್ ಆಫ್ ವೇಣುಗ್ರಾಮನ ಅಧ್ಯಕ್ಷ ವಿನಯಕುಮಾರ ಬಾಯಿಕಾಯಿ ಅವರು ಈ ವೇಳೆ ಮಾರ್ಗದರ್ಶನ ಮಾಡಿದರು. ಫೋಟೋ ತೆಗೆಯುವುದು ಕೇಲವರಿಗೆ ಹವ್ಯಾಸವಾಗಿರಬಹುದು ಆದರೇ ಛಾಯಾಗ್ರಾಹಕರ ಕಸುಬೇ ಇದಾಗಿದೆ. ಛಾಯಾಗ್ರಾಹಕರಲ್ಲಿ ಸಮರ್ಪಣಾ ಮನೋಭಾವ ಇರಬೇಕು. ಅದು ಅವರು ಸೆರೆ ಹಿಡಿಯುವ ದೃಶ್ಯಗಳಲ್ಲಿ ಎದ್ದು ಕಾಣುವಂತವರಿರಬೇಕು. ಛಾಯಾಗ್ರಹಣ ಇದೊಂದು ಅದ್ಭುತ ಕಲೆ ಎಂದರು.

ಡಾ. ನೀತಾ ದೇಶಪಾಂಡೆ, ಮೇಘನ ನಾಯಿಕ, ಪವಾರ್ ಮತ್ತು ಮಧುನಾಯಕ ಅವರು ಛಾಯಾಗ್ರಾಹಕರ ನೇತ್ರ ಮತ್ತು ಕಿವಿಗಳ ತಪಾಸಣೆಯನ್ನು ನಡೆಸಿ, ಯೋಗ್ಯ ಮಾರ್ಗದರ್ಶನ ನೀಡಿದರು.
ಹರಿಭಾವು ಪಾಟೀಲ, ಸುರೇಶ ಬಡವೆ, ಶರದ ಗುಹಾಗರಕರ, ಉಮೇಶ ಪಾಟೀಲ್, ಇನ್ನುಳಿದ ಗಣ್ಯರನ್ನು ಈ ವೇಳೆ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಸಂಜಯ ಹಿಶೋಬಕರ, ನಾಮದೇವ ಕೋಳೆಕರ, ಅನ್ವರ್ ಬೇಗ್, ನಿತೀನ್ ಮಹಾಲೆ, ಭರಮಾ ಮೋಟರೆ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
