BAN

ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಮತ್ತಷ್ಟು ತೀವ್ರಗೊಳ್ಳಿಸಲು ಮುಂದಾದ ಹೋರಾಟಗಾರರು….. ಮೇ‌. 30 ರಂದು ಧಾರವಾಡ ಬಂದ್‌ಗೆ ಹಿರಿಯ ನ್ಯಾಯವಾದಿ ಬಿ.ಡಿ ಹಿರೇಮಠ ಕರೆ‌.

Share

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಶಿಫಾರಸ್ಸಿಗೆ ಅನುಮೋದನೆ ನೀಡುವಂತೆ ಆಗ್ರಹಿಸಿ, ಇದೆರ ಮೇ. 30 ರಂದು ಧಾರವಾಡ ಬಂದ್ ಮಾಡಲಾಗುವುದು ಎಂದು ಹಿರಿಯ ನ್ಯಾಯವಾದಿ ಬಿ.ಡಿ ಹಿರೇಮಠ ಮಾಹಿತಿ ನೀಡಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ, ಈ ಕುರಿತು ಈಗಾಗಲೇ ಹೋರಾಟಗಾರರ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿದರೂ ಇನ್ನೂ ಕಾನೂನು ಸಲಹೆ ಪಡೆಯುವ ಮಾತು ಹೇಳಿದ್ದಾರೆ.

 

ನಮ್ಮ ಹೋರಾಟ ನಿಲ್ಲುವುದಿಲ್ಲ, ಈಗ ಸರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಮುಂದೆ ಮೇ 30 ರಂದು ಧಾರವಾಡ ಬಂದ್ ಕರೆ ನೀಡಲಾಗುವುದು. ಅದಕ್ಕೂ ರಾಜ್ಯಪಾಲರು ಸ್ಪಂದಿಸದೇ ಇದ್ದರೇ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

 

Tags:

error: Content is protected !!