Belagavi

ಬೆಳಗಾವಿಯ ಚಿದಂಬರನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Share

ವಿಜಯಾ ಅರ್ಥೋ ಮತ್ತು ಟ್ರಾಮಾ ಸೆಂಟರ್ ಮತ್ತು ದಕ್ಷತಾ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಡಾ. ರವಿ ಪಾಟೀಲ ಅವರ ನೇತೃತ್ವದಲ್ಲಿ ಬೆಳಗಾವಿಯ ಚಿದಂಬರ ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಭಾನುವಾರದಂದು ಬೆಳಗಾವಿಯ ಚಿದಂಬರ ನಗರದಲ್ಲಿರುವ ಶ್ರೀ ಶಿವಚಿದಂಬರ ದೇವಸ್ಥಾನದ ಪ್ರಾಂಗಣದಲ್ಲಿ ವಿಜಯಾ ಅರ್ಥೋ ಮತ್ತು ಟ್ರಾಮಾ ಸೆಂಟರ್ ಮತ್ತು ದಕ್ಷತಾ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಡಾ. ರವಿ ಪಾಟೀಲ ಅವರ ನೇತೃತ್ವದಲ್ಲಿ ಬೆಳಗಾವಿಯ ಚಿದಂಬರ ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ನುರಿತ ವೈದ್ಯರಿಂದ ಜೆನೆರಲ್ ಮೆಡಿಸಿನ್, ಅರ್ಥೋಪಡಿಕ್ಸ್ ಮತ್ತು ನ್ಯೂರೋಲಾಜಿಗೆ ಸಂಬಂಧಿಸಿದ ರೋಗಿಗಳನ್ನು ತಪಾಸಿಸಲಾಯಿತು. (ಫ್ಲೋ)
ಈ ಕುರಿತು ಇನ್ ನ್ಯೂಸಗೆ ಹೆಚ್ಚಿನ ಮಾಹಿತಿಯನ್ನು ನೀಡಿದ ಡಾ. ಅಮೀತ್ ಮಾಳಗಿ ಅವರು ವಿಜಯಾ ಅರ್ಥೋ ಮತ್ತು ಟ್ರಾಮಾ ಸೆಂಟರ್ ಮತ್ತು ದಕ್ಷತಾ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಡಾ. ರವಿ ಪಾಟೀಲ ಅವರ ನೇತೃತ್ವದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸಾಮಾನ್ಯ ಕಾಯಿಲೆಗಳಾದ ಬಿಪಿ, ಶುಗರ್, ತ್ವಚೆಗೆ ಸಂಬಂಧಿಸಿದ ಕಾಯಿಲೆ, ನರರೋಗ ಸಂಧಿವಾತ, ಇನ್ನಿತರ ಎಲ್ಲ ತರಹದ ಕಾಯಿಲೆಗಳ ತಪಾಸಣೆ ಉಚಿತವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು. ಅಲ್ಲದೇ ರೋಗಿಗಳ ಚಿಕಿತ್ಸೆಗಾಗಿ ವಿಜಯಾ ಅರ್ಥೋ ಮತ್ತು ಟ್ರಾಮಾ ಸೆಂಟರ್ ಮತ್ತು ದಕ್ಷತಾ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು.


ಈ ಸಂದರ್ಭದಲ್ಲಿ ಡಾ.ಅಬ್ದುಲ್, ಡಾ. ನೀಲಮ್, ಸೇರಿದಂತೆ ಇನ್ನುಳಿದವರು ರೋಗಿಗಳನ್ನು ತಪಾಸಿಸಿ ಯೋಗ್ಯ ಮಾರ್ಗದರ್ಶನ ಮಾಡಿದರು. ನೂರಾರು ಜನರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.

Tags:

error: Content is protected !!