Dharwad

6ನೇ ದಿನಕ್ಕೆ ಕಾಲಿಟ್ಟ ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ್..

Share

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ಇಂದು ಆರನೇ ದಿನಕ್ಕೆ ಕಾಲಿಟ್ಟದ್ದು, ಹೋರಾಟಗಾರ ಆಕ್ರೋಶ ಕಡಿಮೆಯಾಗಿಲ್ಲ. ಇದರ ಮಧ್ಯ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಕಾಂಕ್ರೋಚ್ ಜನತಾ ಪಾರ್ಟಿ ಕೂಡಾ ಈಗ ಪ್ರತ್ಯೇಕ ಪಾಲಿಕೆಗೆ ಬೆಂಬಲ ಸೂಚಿಸಿದ್ದು, ಹೋರಾಟದ ಗಮನ ಸೆಳೆದಿದೆ.‌

ಹೌದು.. ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಧಾರವಾಡದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹವು ಇಂದು ಆರನೇ ದುನಕ್ಕೆ ಕಾಲಿಟ್ಟಿದೆ. ಈ ಹೋರಾಟಕ್ಕೆ ಈಗ ಕೆಲವೇ ಕಲವು ದಿನಗಳಲ್ಲಿ ಸೊಸಿಯಲ್ ಮೀಡಿಯಾದಲ್ಲಿ ಮಿಲಿಯನ್ ಫಾಲೋವರ್ಸಗಳನ್ನು ತನ್ನ ಕಡೆ ಸೆಳೆದಿರುವ ಕಾಕ್ರೋಚ್ ಜನತಾ ಪಾರ್ಟಿ ಕೂಡಾ ಬೆಂಬಲ ಸೂಚಿಸಿ, ಹೋರಾಟದಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ. ಕಾಕ್ರೋಚ್ ಜನತಾ ಪಕ್ಷದ ಬೆಂಬಲಿಗ ಸಲೀಮ್ ನೇತೃತ್ವದಲ್ಲಿ ಪ್ರತ್ಯೇಕ ಪಾಲಿಕೆ ಧರಣಿಯಲ್ಲಿ ಭಾಗವಹಿಸಿ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ಧಾರವಾಡ ನಗರಕ್ಕೆ ಪ್ರತ್ಯೇಕ ಪಾಲಿಕೆ ಅಸ್ತಿತ್ವಕ್ಕೆ ಬರಬೇಕು. ಧಾರವಾಡ ನಗರ ಶಾಂತ ನಗರವಾಗಿದ್ದು, ಅಭಿವೃದ್ಧಿ ಕುಂಠಿತವಾಗುತ್ತಿದೆ. ಅವಳಿನಗರ ಪಾಲಿಕೆಯ ತಾರತಮ್ಯದಿಂದಾಗಿ ಅಭಿವೃದ್ಧಿಗೆ ಕಷ್ಟವಾಗುತ್ತಿದೆ. ಹಾಗಾಗಿ ಪ್ರತ್ಯೇಕ ಪಾಲಿಕೆ ಧಾರವಾಡ ನಗರಕ್ಕೆ ಅವಶ್ಯವಿದ್ದು, ರಾಜ್ಯಪಾಲರು ಕಾನೂನು ಸಲಹೆ ನೆಪವೊಡಿ ವಿಳಂಬ ಮಾಡುವುದು ಸರಿಯಲ್ಲ, ತಮ್ಮ ಅಂಕಿತ ಹಾಕಿ ಘೋಷಣೆ ಮಾಡವೇಕು ಎಂದು ಆಗ್ರಹಿಸಿದರು. ‌

Tags:

error: Content is protected !!