ಪ್ರಗತಿಪರ ರೈತನಿಗೆ ದ್ರಾಕ್ಷಿ ಕೃಷಿ ಸಂಭ್ರಮ

4 ಎಕರೆಯಲ್ಲಿ ಭರ್ಜರಿ ಬೆಳೆ ಯಶಸ್ಸು
ಸಚಿವ ಎಂ.ಬಿ.ಪಾಟೀಲ್ ಭೇಟಿಯಾದ ರೈತ
ಬಬಲೇಶ್ವರ ಕ್ಷೇತ್ರದಲ್ಲಿ ಹಸಿರಾದ ಬದುಕು
ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ತಾಜಪುರ (ಹೆಚ್) ಗ್ರಾಮದ ಪ್ರಗತಿಪರ ರೈತ ಆರ್.ಜಿ. ಯರನಾಳ ಅವರು ಸಚಿವ ಎಂ.ಬಿ.ಪಾಟೀಲ ಇವರನ್ನು ಭೇಟಿಯಾದರು.
ಈ ವೇಳೆ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದ ದ್ರಾಕ್ಷಿ ಫಸಲು ಗಮನಾರ್ಹ ಯಶಸ್ಸು ಕಂಡಿದೆ. ಒಣಗಿಸಿ, ಪ್ಯಾಕೆಟ್ ಗಳಲ್ಲಿ ತುಂಬಿ ಮಾರಾಟ ಮಾಡುವ ಕಾರ್ಯಕ್ಕೂ ಕೈ ಹಾಕಿದ್ದು, 50 ಲಕ್ಷ ರೂಪಾಯಿಗಳ ಆದಾಯದ ನಿರೀಕ್ಷೆಯಲ್ಲಿರುವುದಾಗಿ ಹೆಮ್ಮೆಯಿಂದ ತಿಳಿಸಿದರು. ಸಚಿವ ಎಂ.ಬಿ.ಪಾಟೀಲ ಇವರು ಪರಿಣಾಮಕಾರಿಯಾಗಿ ಜಾರಿಗೆ ತಂದ ನೀರಾವರಿ ಮತ್ತು ಕೆರೆ ತುಂಬುವ ಯೋಜನೆಗಳಿಂದ ಇಂದು ತಮ್ಮ ಗ್ರಾಮದಲ್ಲಿ ತೋಟಗಾರಿಕೆ ಸಮೃದ್ಧವಾಗಿ ಬೆಳೆದಿದೆ ಎಂದು ತಿಳಿಸಿದರು. ರೈತ ಯರನಾಳ ಸೇರಿದಂತೆ ನಮ್ಮೆಲ್ಲಾ ರೈತ ಬಾಂಧವರ ಬದುಕು ಹಸಿರಾಗಿರಲಿ, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂದು ಸಚಿವರು ಮನಃಪೂರ್ವಕವಾಗಿ ಹಾರೈಸಿದರು.
