Vijaypura

ಅನುಮಾನಕ್ಕೆ ಬಲಿಯಾಯ್ತು ಹಸುಗೂಸು, ಮಗ ತನ್ನಂತಿಲ್ಲವೆಂದು ಮಗನನ್ನೇ ಕೃಷ್ಣೆಗೆ ತಳ್ಳಿದ ಪಾಪಿ ತಂದೆ…

Share

• ಅನುಮಾನಕ್ಕೆ ಬಲಿಯಾಯ್ತು ಆರು ವರ್ಷದ ಹಸುಗೂಸು
• ಮುಖ ಹೋಲಿಕೆಯಿಲ್ಲವೆಂದು ಮಗನನ್ನೇ ಕೊಂದ ತಂದೆ
• ಕೃಷ್ಣಾ ನದಿಯಲ್ಲಿ ಮುಗ್ಧ ಬಾಲಕ ಜಲಸಮಾಧಿ
• ಪಾಪಿ ತಂದೆ ಮಲ್ಲಿಕಾರ್ಜುನ ಅರಕೇರಿ ಅರೆಸ್ಟ್

ಸಮಾಜದಲ್ಲಿ ಮನುಷ್ಯನ ವಿಕೃತ ಮನಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎನ್ನುವುದಕ್ಕೆ ಈ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕೇವಲ ಕೆಲ ವ್ಯಕ್ತಿಗಳು ಚೇಡಿಸುವ ಮಾತಿಗೆ ಮರುಳಾದ ತಂದೆಯೊಬ್ಬ, ತನ್ನದೇ ಮಗುವಿಗೆ ಕೃಷ್ಣಾ ನದಿಗೆ ಎಸೆದು ಹತ್ಯೆ ಮಾಡಿದ್ದಾನೆ. ಆರು ವರ್ಷದ ಕಂದಮ್ಮನನ್ನೇ ಬಲಿ ಪಡೆದ ಆ ಅಮಾನವೀಯ ಘಟನೆಯೊಂದು ನಡೆದಿದ್ದಾದರೂ ಎಲ್ಲಿ ಅಂತೀರಾ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

 

ಹೌದು, ಈ ಫೋಟೋದಲ್ಲಿ ಕಾಣುತ್ತಿರೋ ಈ ಮುಗ್ಧ ಬಾಲಕನ ಹೆಸರು ಸಿದ್ದಾರ್ಥ. ಕೇವಲ 6 ವರ್ಷದ ಈ ಪೋರನಿಗೆ ತಾನು ಹುಟ್ಟಿ ಬೆಳೆದ ಈ ಪ್ರಪಂಚವೇ ಇನ್ನೂ ಸರಿಯಾಗಿ ಪರಿಚಯವಾಗಿರಲಿಲ್ಲ. ಆದರೆ, ಜನ್ಮ ನೀಡಿದ ತಂದೆಯೇ ಆತನ ಪಾಲಿಗೆ ಯಮನಾಗಿ ಬಂದಿದ್ದಾನೆ. ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಎಂಬಾತನೇ ತನ್ನ ಮಗ ಸಿದ್ದಾರ್ಥನನ್ನ ಹತ್ಯೆ ಮಾಡಿದ ಪಾಪಿ ತಂದೆಯಾಗಿದ್ದಾನೆ. ತನ್ನ ಮಗನಿಗೆ ತಂದೆಯೇ ಕೊಲ್ಲಲು ಪ್ರಮುಖ ಕಾರಣ ಮಗ ತಂದೆಯಂತೆ ಹೋಲಿಕೆ ಇಲ್ಲ ಎಂಬುದು. ಇನ್ನೂ ಮಲ್ಲಿಕಾರ್ಜುನನಿಗೆ ಕೆಲ ಗೆಳೆಯರು ನಿನ್ನ ಮಗ ನಿನ್ನ ಹಾಗೆ ಇಲ್ಲ ಎಂದು ಚೇಡಿಸುತ್ತಿದ್ದರಂತೆ, ನಿನ್ನ ಮಗನ ಹೋಲಿಕೆ ನಿನ್ನ ಮುಖಕ್ಕೆ ಸಿಗುತ್ತಿಲ್ಲ ಎಂಬ ಮಾತನ್ನೇ ದಿನನಿತ್ಯ ಕೇಳಿ ರೋಸಿಹೋದ ಮಲ್ಲಿಕಾರ್ಜುನ, ತನ್ನ ಹೆತ್ತ ಮಗನನ್ನೇ ಕೊಲ್ಲಲು ಸಂಚು ರೂಪಿಸಿದ್ದಾನೆ. ಮಾರ್ಚ್ 16 ರಂದು ಮಗನನ್ನು ಕೋಚಿಂಗ್ ಸೆಂಟರ್ ಗೆ ಸೇರಿಸಲು ಸಿಂದಗಿಗೆ ಕರೆದುಕೊಂಡು ಹೋಗುವೆ ಎಂದು ಮನೆಯವರಿಗೆ ಹೇಳಿ ಮನೆಯಿಂದ ಕರೆದುಕೊಂಡು ಹೋದವನು, ನೇರವಾಗಿ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕರಾಡ್ ಬಳಿ ಕೃಷ್ಣಾ ನದಿಗೆ ಮಗುವನ್ನು ತಳ್ಳಿ ವಾಪಸ್ ಬಂದಿದ್ದಾನೆ.‌ ಬಳಿಕ ಏನೂ ಆಗಿಲ್ಲವೆಂಬಂತೆ ನಟನೆ ಮಾಡಿದ್ದಾನೆ…

ಇನ್ನೂ ಮಗನಿಗೆ ಕರೆ ಮಾಡಿ ಮಾತಾಡಿಸಿ ಎಂದು ತಾಯಿ ಕೇಳಿದಾಗ ಯಾರೊ ಒಬ್ಬರಿಗೆ ಕರೆ ಮಾಡಿದ ಮಲ್ಲಿಕಾರ್ಜುನ, ಪೋನ್ ರಿಸೀವ್ ಮಾಡಿದ ವ್ಯಕ್ತಿ ಇಲ್ಲ ಮಗ ಮಾತನಾಡಲು ಒಪ್ಪುತ್ತಿಲ್ಲ, ಆತ ಆಟದಲ್ಲಿ ಬ್ಯೂಜಿ ಇದ್ದಾನೆ ಎಂದು ಭಾಗ್ಯಶ್ರೀ ಮುಂದೆ ಹೇಳಿದ್ದಾರೆ. ಬಳಿಕ ಇದೇ ಏಪ್ರೀಲ 1 ರಂದು ಸಿದ್ದಾರ್ಥನ ಬರ್ತಡೇ ಇರುವ ಕಾರಣ ಮಾರ್ಚ 31 ರಂದು ಮಗನಿಗೆ ಭೇಟಿ ಮಾಡಿಸುತ್ತೇನೆ ಎಂದು ಮಲ್ಲಿಕಾರ್ಜುನ ಹೆಂಡತಿಯನ್ನು ಕರೆದುಕೊಂಡು ಜಿಲ್ಲೆಯ ಸಿಂದಗಿಗೆ ಹೋಗಿ ಇಡೀ ದಿನ ಅಲ್ಲಿ ಸುತ್ತಾಡಿಸಿ ಕೊನೆಗೆ ಮಗನಿಗೆ ಭೇಟಿಯೇ ಮಾಡಿಸಿಲ್ಲ, ಇದರಿಂದ ಆತಂಕಗೊಂಡು ಹಿರಿಯರನ್ನು ಸೇರಿಸಿ ತಾಯಿ ಕೇಳಿದ್ದಾಳೆ. ಆಗಲು ಆತ ಏನನ್ನು ಹೇಳಿಲ್ಲ, ಕೊನೆಗೆ ಹೆಂಡತಿಯನ್ನು ಮುಂದೆ ಮಗನನ್ನು ಮರೆತು ಬಿಡು ಎಂದು ಹೇಳಿ ಮನೆಯಿಂದ ಹೋಗಿದ್ದಾನೆ. ಬಳಿಕ ಮಗ ಹಾಗೂ ತಂದೆ ಕಾಣೆಯಾದ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಬಳಿಕ ಮಲಿಕಾರ್ಜುನ ಕರೆ ತಂದ ಪೊಲೀಸರು ವಿಚಾರಣೆ ನಡೆಸಿದಾಗ ಮಗನಿಗೆ ತಂದೆ ಕೃಷ್ಣಾ ನದಿಗೆ ಬೀಸಾಕಿದ ಘಟನೆ ಬೆಳಕಿಗೆ ಬಂದಿದೆ..

ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಹುಟ್ಟಿದ ಮಗು ಹೋಲಿಕೆಯಲ್ಲಿ ತನ್ನಂತೆ ಇಲ್ಲ ಅನ್ನೋ ಕಾರಣಕ್ಕ ಕರಳು ಬಳ್ಳಿಯನ್ನೇ ಹಿಚುಕಿದ ಪಾಪಿ ತಂದೆಗೆ ಕಠಿಣ ಶಿಕ್ಷೆಯಾಗಲಿ ಎನ್ನುವುದೇ ಪ್ರಜ್ಞಾವಂತರ ಆಗ್ರಹವಾಗಿದೆ…

Tags:

error: Content is protected !!