Belagavi

ಖಾನಾಪುರ: ಶಾಂತತಾ ಸಭೆಯಲ್ಲಿ ರೌಡಿ ಶೀಟರ್ ಭಾಗಿ; ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಬ್ಲಾಕ್ ಕಾಂಗ್ರೆಸ್ ಆಕ್ರೋಶ

Share

1. ಪೊಲೀಸ್ ಶಾಂತತಾ ಸಭೆಯಲ್ಲಿ ರೌಡಿ ಶೀಟರ್‌ ಪ್ರತ್ಯಕ್ಷ
2. ಇನ್ಸ್‌ಪೆಕ್ಟರ್ ಗೌಂಡಿ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ
3. ಸಂವಿಧಾನಕ್ಕೆ ಅವಮಾನ; ಎಸ್‌ಪಿಗೆ ದೂರು ಸಲ್ಲಿಕೆ
4. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಖಾನಾಪುರ ಪೊಲೀಸ್ ಇಲಾಖೆಯ ನಡವಳಿಕೆ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಗೆ ರೌಡಿ ಶೀಟರ್‌ಗಳನ್ನು ಆಹ್ವಾನಿಸಿರುವುದು ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ ಬ್ಲಾಕ್ ಕಾಂಗ್ರೆಸ್, ಇನ್ಸ್‌ಪೆಕ್ಟರ್ ಎಲ್.ಎಚ್. ಗೌಂಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.
ಖಾನಾಪುರ ಪೊಲೀಸ್ ಇನ್‌ಸ್ಪೆಕ್ಟರ್ ಎಲ್.ಎಚ್. ಗೌಂಡಿ ಅವರು ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯ ಪೂರ್ವಭಾವಿ ಶಾಂತತಾ ಸಭೆಯಲ್ಲಿ ರೌಡಿ ಶೀಟರ್‌ಗಳಿಗೆ ಭಾಗವಹಿಸಲು ಅವಕಾಶ ನೀಡಿದ್ದನ್ನು ಖಾನಾಪುರ ತಾಲೂಕಾ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಈ ಕುರಿತು ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ನ್ಯಾಯವಾದಿ ಈಶ್ವರ ಘಾಡಿ ಅವರು, “ರಾಜ್ಯದಲ್ಲಿ ಸಂವಿಧಾನ ಗೌರವಿಸುವ ಸರ್ಕಾರವಿದ್ದು, ರಾಹುಲ್ ಗಾಂಧಿಯವರು ಸಂವಿಧಾನದ ಸಂದೇಶ ಸಾರುತ್ತಿದ್ದಾರೆ. ಆದರೆ ಪೊಲೀಸರು ರೌಡಿ ಶೀಟರ್‌ಗಳನ್ನು ಕರೆಸಿ ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು. ಈ ಗಂಭೀರ ಲೋಪದ ಬಗ್ಗೆ ಎಸ್‌ಪಿ ಅವರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಡಿಸಿಯವರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹುತ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಾವಿತ್ರಿ ಮಾದಾರ, ಸೂರ್ಯಕಾಂತ ಕುಲಕರ್ಣಿ, ಸುರೇಶ್ ಜಾಧವ್, ತೋಹೀದ್ ಚಾದಖಾನವರ, ಗುಡ್ಡು ಸಾಬ್ ಆದಮ ಸಾಬ್ ತೇಕಡಿ ಹಾಗೂ ದೀಪಕ್ ಕವಟನಕರ ಉಪಸ್ಥಿತರಿದ್ದರು.

Tags:

error: Content is protected !!