ಪಿಎಸ್ಐ ವಿರುದ್ಧ ಸಿಬ್ಬಂದಿ ಪತ್ರ ವೈರಲ್

ದಯಾಮರಣ ಕೋರಿದ ನೊಂದ ಪೊಲೀಸರು
ಲಂಚದ ಆರೋಪ; ತನಿಖೆಗೆ ಆದೇಶ
ಸಹಿ ಇಲ್ಲದ ಪತ್ರದ ಸುತ್ತ ಅನುಮಾನ
ವಿಜಯಪುರ ನಗರದ
ಆದರ್ಶನಗರ ಪೊಲೀಸ್ ಠಾಣೆ ಪಿಎಸ್ಐ ವಿರುದ್ಧ ಅದೇ ಠಾಣೆ ಸಿಬ್ಬಂದಿ ಹಾಗೂ ಅಧಿಕಾರಿಗಳು ದಯಾಮರಣ ಕೋರಿ ರಾಜ್ಯಪಾಲರು, ಸಿಎಂ ಸಿದ್ದರಾಮಯ್ಯ, ಗೃಹಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿತ್ತು. ಆದರೆ ಆ ಪತ್ರದ ಸತ್ಯಾಸತ್ಯತೆ ಬಗ್ಗೆ ಇದೀಗ ಸಂಶಯ ಮೂಡಿದೆ ಎನ್ನಲಾಗಿದೆ. ಈ ಕುರಿತು ಇಲ್ಲಿದೆ ಒಂದು ವರದಿ..
ಹೌದು…ವಿಜಯಪುರ ನಗರದ ಆದರ್ಶನಗರ ಪೊಲೀಸ್ ಠಾಣೆ ಪಿಎಸ್ಐ ವಿರುದ್ಧ ಅದೇ ಠಾಣೆ ಸಿಬ್ಬಂದಿ ಹಾಗೂ ಅಧಿಕಾರಿಗಳು ದಯಾಮರಣ ಕೋರಿ ರಾಜ್ಯಪಾಲರು, ಸಿಎಂ ಸಿದ್ದರಾಮಯ್ಯ, ಗೃಹಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿತ್ತು. ಆದರೆ ಆ ಪತ್ರದ ಸತ್ಯಾಸತ್ಯತೆ ಬಗ್ಗೆ ಇದೀಗ ಸಂಶಯ ಮೂಡಿದೆ ಎನ್ನಲಾಗಿದೆ. ಪಿಎಸ್ಐ ಸೀತಾರಾಮ ಲಮಾಣಿ ಎಂಬುವರ ವಿರುದ್ಧ ಲಂಚದ ಆರೋಪ ಮಾಡಿ, ದಯಾಮರಣ ಪತ್ರ ಬರೆದಿದ್ದಾರೆ ಎನ್ನಲಾಗಿತ್ತು. ಆದರೆ ಆ ಪತ್ರ ಅಸಲಿಯಾ ಅಥವಾ ನಕಲಿಯಾ ಅನ್ನೋದರ ಬಗ್ಗೆ ಇಲಾಖೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇನ್ ನ್ಯೂಜ್ ಲಭ್ಯವಾಗಿದೆ. ಈ ಪತ್ರದಲ್ಲಿ ಯಾವುದೇ ಸಹಿ ಇಲ್ಲದ ಕಾರಣ ಪತ್ರದ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಚರ್ಚೆ ಶುರುವಾಗಿದೆ. ಯಾರೋ ನಕಲಿ ವ್ಯಕ್ತಿಗಳು ಅಥವಾ ಕಿಡಿಗೇಡಿಗಳು ಪತ್ರ ಬರೆದಿರಬಹುದು ಅನ್ನೋ ಅನುಮಾನ ಮೂಡುತ್ತಿದೆಯಂತೆ.
ಇನ್ನು ಒಂದೊಂದು ಕ್ರೈಂಗೆ ಒಂದೊಂದು ರೇಟ್ ಫಿಕ್ಸ್ ಮಾಡಿದ್ದಾರೆ ಅಂತ ವೈರಲ್ ಆದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಬಾರ್, ಡಾಬಾ, ಅಕ್ರಮ ಅಕ್ಕಿ ಸಾಗಾಟ, ಗ್ಯಾಸ್ ಮಾರಾಟ, ಸಿಗರೆಟ್, ಮಾವಾ ಸೇರಿದಂತೆ ವಿವಿಧ ಕ್ರೈಂಗಳಿಗೆ ರೇಟ್ ಫಿಕ್ಸ್ ಮಾಡಿ, ಹಣ ವಸೂಲಿ ಮಾಡುತ್ತಿದ್ದಾರೆ ಅಂತ ಆರೋಪಿಸಲಾಗಿತ್ತು. ವರ್ಗಾವಣೆಗಾಗಿ ಹಣ ಹೊಂದಿಸಲು ವಸೂಲಿಗೆ ಇಳಿದ್ದಾರೆ ಎಂದು ಪತ್ರದಲ್ಲಿ ಗಂಭೀರ ಆರೋಪ ಮಾಡಲಾಗಿತ್ತು.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಗೃಹಸಚಿವ ಡಾ. ಜಿ. ಪರಮೇಶ್ವರ್, ವಿಜಯಪುರ ನಗರ ಶಾಸಕ ಯತ್ನಾಳ, ಪೊಲೀಸ್ ಮಹಾನಿರ್ದೇಶಕರ ಹೆಸರಿನಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿತ್ತು. ತಮಗೆ ದಯಾ ಮರಣ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದು, ನೊಂದ ಆದರ್ಶನಗರ ಪೊಲೀಸ್ ಸಿಬ್ಬಂದಿಗಳು ಎಂದು ಮಾತ್ರ ಉಲ್ಲೇಖಿಸಲಾಗಿತ್ತು.
ಆದರೆ ಇದೀಗ ಆ ಪತ್ರದ ಬಗ್ಗೆ ಅನುಮಾನ ಮೂಡಿದ್ಯಂತೆ. ಈ ಹಿಂದೆ ವಿಜಯಪುರದ ಮನಗೂಳಿ, ಚಡಚಣ, ಬಸವನ ಬಾಗೇವಾಡಿ ಪೊಲೀಸ್ ಠಾಣೆಗಳ ಸಿಬ್ಬಂದಿ ಹೆಸರಿನಲ್ಲೂ ಇದೇ ರೀತಿಯ ಪತ್ರ ಬರೆದಿದ್ದು, ಆಗಲೂ ಸಾಕಷ್ಟು ವೈರಲ್ ಆಗಿತ್ತು. ಇದೀಗ ತನಿಖೆ ನಡೆಯುತ್ತಿದ್ದು, ಅದರ ಬಳಿಕವಷ್ಟೇ ಈ ಪತ್ರದ ಸತ್ಯಾಸತ್ಯತೆ ಬಗ್ಗೆ ತಿಳಿಯಲಿದೆ.
