ಕಾಂಗ್ರೆಸ್ ವಿರುದ್ಧ ಪಾಲಿಕೆಯಲ್ಲಿ ನಿರ್ಣಯ.

ಮಹಿಳಾ ಮೀಸಲಾತಿ ವಿರೋಧಕ್ಕೆ ಆಕ್ರೋಶ.
ನಾರಿ ಶಕ್ತಿಗೆ ಕೈ ಪಾಳಯದಿಂದ ಅಗೌರವ?
ಚರ್ಚೆಗೆ ಹೆದರಿ ವಿಪಕ್ಷ ಸಭೆ ಬಹಿಷ್ಕಾರ.
ನಾರಿ ಶಕ್ತಿ ಅಧಿನಿಯಮ ಕಾನೂನನ್ನು ಕೇಂದ್ರ ಸರಕಾರಕ್ಕೆ ವಿರೋಧ ಮಾಡಿರುವ ಕಾಂಗ್ರೆಸ್ ನಡೆಯ ವಿರುದ್ಧ ಪಾಲಿಕೆಯ ಸಭೆಯಲ್ಲಿ ಮೇಯರ್ ಪ್ರೀತಿ ಕಾಮಕರ ಠರಾವ್ ಪಾಸ್ ಮಾಡಿದರು.
ಶನಿವಾರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಂಡರು. ಮಹಿಳಾ ಮೀಸಲಾತಿ ಕೇಂದ್ರ ಸರಕಾರ 33% ಮೀಸಲಾತಿ ಬಿಲ್ ವಿರೋಧಿಸಿರುವ ಕಾಂಗ್ರೆಸ್ ವಿರೋಧ ಮಾಡಿರುವುದನ್ನು ಪಾಲಿಕೆಯಲ್ಲಿ ಎಲ್ಲ ಸದಸ್ಯರು ಖಂಡಿಸಿದ್ದಾರೆ ಎಂದರು.
ಉಪಮೇಯರ್ ಹನುಮಂತ ಕೊಂಗಾಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಕೇಂದ್ರ ಸರಕಾರದ ನಾರಿ ಶಕ್ತಿ ಯೋಜನೆಯನ್ನು ವಿರೋಧಿ ನೀತಿಯನ್ನು ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ನಾರಿ ಶಕ್ತಿ ವಿಷಯ ಚರ್ಚೆ ಬರುತ್ತದೆ ಎಂದು ಪಾಲಿಕೆ ವಿಪಕ್ಷ ಸದಸ್ಯರು ಸಭೆ ಬಹಿಷ್ಕಾರ ಹಾಕಿದ್ದಾರೆ ಎಂದರು.
ಪಾಲಿಕೆ ಬಿಜೆಪಿ ಸದಸ್ಯ ರಾಜಶೇಖರ ಡೋಣಿ ಮಾತನಾಡಿ, ಕೇಂದ್ರ ಸರಕಾರದ ನಾರಿ ಶಕ್ತಿ ಯೋಜನೆಯನ್ನು ವಿರೋಧ ಮಾಡುವ ಕಾಂಗ್ರೆಸ್ ನಡೆ ಮಹಿಳೆಯರಿಗೆ ಅಗೌರವ ತರುವ ಕೆಲಸ ಮಾಡಿದ್ದಾರೆ. ಇದನ್ನು ಖಂಡಿಸಿ ಪಾಲಿಕೆಯ ಸಭೆಯಲ್ಲಿ ಖಂಡಿಸುವುದು ಅಗತ್ಯವಾಗಿದೆ ಎಂದರು.
