Kagawad

ಉಗಾರ್ ಬುದ್ರುಕ: ಮೇ 5 ರಂದು ಶ್ರೀ ಪದ್ಮಾವತಿ ದೇವಿ ಮಂದಿರದ ಭವ್ಯ ಸಭಾ ಭವನ ಹಾಗೂ ಯಾತ್ರಿ ನಿವಾಸ ಉದ್ಘಾಟನೆ

Share

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಉಗಾರ್ ಬುದ್ರುಕ ಗ್ರಾಮದ ಶ್ರೀ ಪದ್ಮಾವತಿ ದೇವಿ ಮಂದಿರದ ಮುಂಭಾಗದಲ್ಲಿ ನಿರ್ಮಿಸಲಾದ ಭವ್ಯ ಸಭಾ ಭವನ ಹಾಗೂ ಯಾತ್ರಿ ನಿವಾಸದ ಉದ್ಘಾಟನಾ ಸಮಾರಂಭವು ಮಂಗಳವಾರ, ಮೇ ೫ ರಂದು ಸಂಜೆ ಜರುಗಲಿದೆ. ಈ ಕುರಿತು ಮಂದಿರದ ಮುಖ್ಯಸ್ಥರು ಹಾಗೂ ಕರ್ನಾಟಕ ರಾಜ್ಯ ಜೈನ ಸಮಾಜ ಅಸೋಸಿಯೇಷನ್ ಉಪಾಧ್ಯಕ್ಷ ಶೀತಲಗೌಡ ಪಾಟೀಲ್ ಮಾಹಿತಿ ನೀಡಿದ್ದಾರೆ.

ಉಗಾರ್ ಬುದ್ರುಕ ಗ್ರಾಮದ ಗ್ರಾಮ ದೇವತೆ ಹಾಗೂ ಅತಿಶಯ ಕ್ಷೇತ್ರವಾಗಿರುವ ಶ್ರೀ ಪದ್ಮಾವತಿ ದೇವಿ ಮಂದಿರದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಸಭಾ ಭವನದ ಉದ್ಘಾಟನೆಯು ಮಂಗಳವಾರ ಸಂಜೆ ೫:೦೦ ಗಂಟೆಗೆ ನೆರವೇರಲಿದೆ. ಶ್ರೀ ಪದ್ಮಾವತಿ ದೇವಿ ಆರಾಧನಾ ಮಹೋತ್ಸವದ ಸುಸಂದರ್ಭದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಿವ್ಯ ಸಾನಿಧ್ಯ:
ಸಮಾರಂಭದ ದಿವ್ಯ ಸಾನಿಧ್ಯವನ್ನು ಕಂಬದಳ್ಳಿ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು, ಸೋಂದಾ ಸ್ವಾದಿ ದಿಗಂಬರ ಜೈನ ಮಠದ ಪ.ಪೂ. ಜಗದ್ಗುರು ಆಕಲಂಕಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳು ಹಾಗೂ ರಾಜಸ್ಥಾನದ ತಿಜಾರಾ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಸೌರಭಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ ಅವರು ವಹಿಸಲಿದ್ದಾರೆ.

ಶ್ರೀ ಪದ್ಮಾವತಿ ದೇವಿ ಮಂದಿರದ ಪರಿಸರದಲ್ಲಿ ಸಭಾ ಭವನ, ಭೋಜನ ಶಾಲೆ ಹಾಗೂ ಯಾತ್ರಿ ನಿವಾಸವನ್ನು ನಿರ್ಮಿಸಲಾಗಿದ್ದು, ಪೂಜ್ಯ ಮಹಾಸ್ವಾಮಿಗಳ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಉದ್ಘಾಟನೆಗೊಳ್ಳಲಿವೆ. ಸಮಸ್ತ ಶ್ರಾವಕ-ಶ್ರಾವಕಿಯರು ತಮ್ಮ ಕುಟುಂಬದೊಂದಿಗೆ ಭಾಗವಹಿಸಿ ಪುಣ್ಯಭಾಜನರಾಗಬೇಕೆಂದು ವಿನಂತಿಸಲಾಗಿದೆ.

ಮುಖ್ಯ ಅತಿಥಿಗಳು:
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಶಿರೋಳ ಶಾಸಕ ಹಾಗೂ ಮಾಜಿ ಸಚಿವ ರಾಜೇಂದ್ರ ಪಾಟೀಲ ಯಡ್ರಾವಕರ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಮಾಜಿ ಇಂಧನ ಸಚಿವ ವೀರಕುಮಾರ ಪಾಟೀಲ, ಮಾಜಿ ಸಚಿವ ಶ್ರೀಮಂತ ಪಾಟೀಲ, ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗೆಣ್ಣವರ, ಮಾಜಿ ಶಾಸಕ ಮೋಹನ ಶಹಾ, ಮಾಜಿ ಶಾಸಕ ಸಂಜಯ ಪಾಟೀಲ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ವಾ.ಕ.ರಾ.ಸಾ. ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹಣಮನ್ನವರ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ವಿಜಯ ಪೂಜಾರಿ ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಮಂದಿರದ ಸದ್ಭಕ್ತರಾದ ಭರತೇಶ್ ಖಂಡೆರಾಜುರಿ, ಅನ್ನಾಸಾಹೇಬ್ ನಂದಗಾವೆ, ದಾದಾ ಅಳಪ್ಪನವರ, ಮನೋಹರ ಚೌಗುಲೆ, ವೃಷಭ ಪಾಟೀಲ್, ಅಭಿಯಂತರ ಆದೇಶ ವಸವಾಡೆ, ದೀಪಕ್ ಪಾಟೀಲ್, ಅಣ್ಣಾಗೌಡ ಪಾಟೀಲ್, ಶೀತಲ್ ಖವಟಕೋಪ್ ಸೇರಿದಂತೆ ಮುಂತಾದವರು ಉಪಸ್ಥಿತರಿರಲಿದ್ದಾರೆ.

Tags:

error: Content is protected !!