ಗ್ರಾಮೀಣಾಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ರೈತರ ಆರ್ಥಿಕ ಸಬಲೀಕರಣವನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದಾದ್ಯಂತ ಜನಮನ್ನಣೆ ಪಡೆದಿರುವ ಸಾಮಾಜಿಕ ಚಳವಳಿಯಾಗಿ ಬೆಳೆದಿದೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಯೋಜನೆ ಗ್ರಾಮೀಣ ಜನರ ಬದುಕಿನಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದಿ ಯೋಜನೆಯ ಕಾಗವಾಡ ಹಾಗೂ ಅಥಣಿ ತಾಲೂಕ ಅಧಿಕಾರಿ ಸಂಜೀವ ಮರಾಠೆ ಉಗಾರದಲ್ಲಿ ಹೇಳಿದರು.
ಮಂಗಳವಾರ ರಂದು ಉಗಾರ ಬುದ್ರುಕ ಗ್ರಾಮದ ಶ್ರೀ ಪದ್ಮಾವತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಧರ್ಮಸ್ಥಳದ ಪರಿಸರ ಜಾಗೃತಿ ಮಾಹಿತಿ ಶಿಬಿರ ಸಸಿ ನಟುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತಿರುವ ಯೋಜನೆ, ರಾಜ್ಯದ ವಿವಿಧ ಭಾಗಗಳಲ್ಲಿ ವೃಕ್ಷಾರೋಪಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಲಕ್ಷಾಂತರ ಸಸಿಗಳನ್ನು ನೆಡುವ ಕಾರ್ಯವನ್ನು ಕೈಗೊಂಡಿದೆ. ಹಸಿರು ಪರಿಸರ ನಿರ್ಮಾಣ, ಮಳೆ ನೀರಿನ ಸಂರಕ್ಷಣೆ ಹಾಗೂ ಜಲ ಸಂಪನ್ಮೂಲಗಳ ಉಳಿವಿಗಾಗಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶಾಲೆಗಳು, ಸಾರ್ವಜನಿಕ ಸ್ಥಳಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರದ ಬಗ್ಗೆ ಜನರಲ್ಲಿ ಕಾಳಜಿ ಮೂಡಿಸಲಾಗುತ್ತಿದೆ.
ಪರಿಸರ ಉಳಿದರೆ ಮಾತ್ರ ಮಾನವ ಜೀವನ ಸುರಕ್ಷಿತವಾಗಿರುತ್ತದೆ ಎಂಬ ಅರಿವು ಮೂಡಿಸುವ ಜೊತೆಗೆ, ರೈತರ ಅಭಿವೃದ್ಧಿಯೇ ದೇಶದ ಅಭಿವೃದ್ಧಿಗೆ ಆಧಾರ ಎಂಬ ಸಂದೇಶವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನ ವಿವಿಧ ಕಾರ್ಯಕ್ರಮಗಳ ಮೂಲಕ ಪರಿಣಾಮಕಾರಿಯಾಗಿ ಸಾರುತ್ತಿದೆ. ಗ್ರಾಮೀಣ ಭಾರತದ ಸುಸ್ಥಿರ ಅಭಿವೃದ್ಧಿಗೆ ಈ ಯೋಜನೆ ಮಾದರಿಯಾಗಿದ್ದು, ಪರಿಸರ ಮತ್ತು ಕೃಷಿ ಕ್ಷೇತ್ರದಲ್ಲಿ ನೀಡುತ್ತಿರುವ ಕೊಡುಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಐನಾಪೂರ, ಉಗಾರ, ಕುಸನಾಳ, ಕಾಗವಾಡ ಪಟ್ಟಣದ ಶಾಲೆಗಳಲ್ಲಿ ೫೫೦ ಸಸಿಗಳನ್ನು ನಡುವ ಉದೇಶವೀದೆ. ವಿಶೇಷವಂದರೆ ಶಾಲೆಗಳಲ್ಲಿ ಬಿಸಿ ಊಟ ನಿರ್ಮಿಸಲು ಅಗತ್ಯೆ ಇರುವ ಕರಿ ಬೇವು, ನುಗ್ಗೆ ಸಸಿಗಳು, ನೀಡಲಾಗುತ್ತಿದ್ದೆ ಎಂದು ಸಂಜೇವ ಮರಾಠೆ ತಿಳಿಸಿದರು. ವಿದ್ಯಾರ್ಥಗಳಿಂದ ಸಸಿಗಳ ಮರವಣಿಗೆ ನೆರವೇರಿತು.
ಪದ್ಮಾವತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮನೋಹರ ಚೌಗುಲ್ಲೆ, ನಿರ್ದೇಶಕರಾದ ಸುರೇಂದ್ರ ಕುಸನಾಳೆ, ಅಣ್ಣಾಸಾಬ ನಂದಗಾವೆ, ಅಮ್ಮಿನ ಶೆಖ, ಪ್ರಶಾಂತ ವಸವಾಡೆ, ಧರ್ಮಸ್ಥಳದ ಸೇವಾ ಪ್ರತಿನಿಧಿ ಶಿವಪ್ಪಾ, ಸುರೇಶ, ಸುಶಮ್ಮಾ ಅಲತಗ್ಗೆ, ಯಶೋದಾ ಚೌಗುಲೆ, ದೀಪಾಲೆ ಪಮ್ಮನ್ನವರ ಸೇರಿದಂತೆ ಶಿಕ್ಷಕರು ಇದ್ದರು.

ಸುಕುಮಾರ್ ಬನ್ನೂರೆ
ಇನ್ನ ನ್ಯೂಸ್ ಕಾಗವಾಡ
