Kagawad

ಕಾಗವಾಡದ ಶ್ರೀ ವಿಠ್ಠಲ ರುಕ್ಮಿಣಿ ಮೂರ್ತಿ ಪ್ರತಿಷ್ಠಾಪನದ 25ನೇ ವರ್ಷದ ಸುವರ್ಣ ಮಹೋತ್ಸವ ನಿಮಿತ್ಯವಾಗಿ ನಾಲ್ಕು ದಿನ ಸಂಕೀರ್ತನ ಕಾರ್ಯಕ್ರಮ.

Share

ಕಾಗವಾಡದ ಶ್ರೀ ಅಂಬಾಬಾಯಿ ಮಂದಿರದಲ್ಲಿ ಶ್ರೀ ವಿಠ್ಠಲ್ ರುಕ್ಮಿಣಿ ಮೂರ್ತಿ ಪ್ರತಿಷ್ಠಾಪಿಸಿ 25 ವರ್ಷ ಪೂರ್ಣಗೊಂಡಿವೆ, ಇದರ ನಿಮಿತ್ತವಾಗಿ ಮೇ 1ರಿಂದ 4 ರ ವರೆಗೆ ನಾಮ ಸಂಕೀರ್ತನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ.

ಕಾಗವಾಡದ ಸಾವಿರಾರು ಭಕ್ತರ ಶ್ರದ್ಧಾ ಸ್ಥಾನವಾಗಿರುವ ಶ್ರೀ ಅಂಬಾಬಾಯಿ ಮಂದಿರದಲ್ಲಿ ವಿಠಲ ರುಕ್ಮಿಣಿ ಮೂರ್ತಿ ಪ್ರತಿಷ್ಠಾಪಿಸಿ 25 ವರ್ಷ ಗತಿಸಿದ್ದು ಸುವರ್ಣ ಮಹೋತ್ಸವವಾಗಿ ನಾಮ ಸಂಕೀರ್ತನ ಕಾರ್ಯಕ್ರಮ ಹಮ್ಮಿಕೊಂಡಳಾಗಿದ್ದು ಈ ಸಮಾರಂಭ ಪಟ್ಟಣ ಪಂಚಾಯಿತಿಯ ಮುಂಭಾಗದಲ್ಲಿ ವಿಶೇಷ ಶಾಮಿಯಾನ ನಿರ್ಮಿಸಿದ್ದು ಇಲ್ಲಿಗೆ ಅನೇಕ ಹೆಸರಾಂತ ಕೀರ್ತನಾಕಾರರು ಭಾಗವಹಿಸಿ ಮಂಗಲಮಯ ವಾತಾವರಣ ನಿರ್ಮಿಸಲಿದ್ದಾರೆ.

ಕಾಗವಾಡದ ಶ್ರೀ ಮರಿ ಮಹಾರಾಜ್, ಅಂಬಾ ಭವಾನಿ, ಬ್ರಹ್ಮ ಚೈತನ್ಯ ಸದ್ಗುರು ಬಾಬಾಜಿ ಬೀಸಲೆ ಮಹಾರಾಜ್ ಇವರ ಕೃಪಾ ಆಶೀರ್ವಾದದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮಾರಂಭದ ನೇತೃತ್ವ ಹರಿಭಕ್ತ ಪಾರಾಯಣ ಗುರುವರ್ಯ
ಬಾಬಾಸಾಹೇಬ್ ಬಿಸಲೆ ಮಹಾರಾಜ್ ಮಾಂಜರಿ ಇವರ ಸಣಧ್ಯದಲ್ಲಿ ಕಾರ್ಯಕ್ರಮ ಜರಗಳಿದೆ.

ಶುಕ್ರವಾರ ಮೇ 1ರಂದು ನೆರೆಯ ಮಹಾರಾಷ್ಟ್ರ ಶಿರೋಳ ತಾಲೂಕಿನ ನಾದಣಿ
ಜೈನಮಠದ ಪರಮ ಪೂಜ್ಯ ಜೀನಸೇನ ಭಟ್ಟಾರಕ ಮಹಾರಾಜರು, ಹಂಚಿನಾಳ ಮಠದ ಮಹೇಶಾನಂದ ಸ್ವಾಮೀಜಿ,
ಇವರ ಸಾನಿಧ್ಯದಲ್ಲಿ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಶನಿವಾರ ದಿನಾಂಕ 2 ರಂದು ಕಾಗವಾಡ ಗುರುದೇವ ಆಶ್ರಮದ ಯತಿ ಸ್ವರಾನಂದ್ ಸ್ವಾಮೀಜಿ, ಹಾಗೂ ಜೋಡಕುರುಳಿ ಸಿದ್ದಾರೂಢ ಮಠದ ಪರಮ ಪೂಜ್ಯ ಚಿದಾನಂದ ಭಾರತೀ ಸ್ವಾಮೀಜಿ, ಇವರ ಸಾನಿಧ್ಯದಲ್ಲಿ ಬೆಳಿಗ್ಗೆ 10ರಂದು
ಸಂತಸಮ್ಮೇಳನ ಕಾರ್ಯಕ್ರಮ ನೆರವೇರಲಿದೆ.

ರವಿವಾರ ದಿನಾಂಕ 3 ರಂದು ವರ್ಮಾನಂದವಾಡಿಯ ಡಾಕ್ಟರ್ ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಮಾಜಿ ಸಂಸದ
ಅಣ್ಣಸಾಬ್ ಜೊಲ್ಲೆ, ಮತ್ತು
ಅಂಕಲಿಕರ್ ಷಿತೋಳೆ ಸರ್ಕಾರ, ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರು ಉಪಸ್ಥಿತಿಯಲ್ಲಿ ಅಮೃತವಾಣಿ ಸಮ್ಮೇಳನ ಬೆಳಗ್ಗೆ 10 ಗಂಟೆಗೆ ಜರುಗಲಿದೆ.

ಸೋಮವಾರ ದಿನಾಂಕ 4 ರಂದು ಬೆಳಿಗ್ಗೆ ಎಂಟು ಗಂಟೆಗೆ ಕಾಲಾ ಕೀರ್ತನ್ ಶ್ರೀ ಹರಿಭಕ್ತಿ ಪಾರಾಯಣ, ಹರಿದಾಸ ಮಹಾರಾಜ್ ರಾಮಬಾಹು ಭೂರಾಟೆ, ಹಾಗೂ ಪಂಡರಪುರದ ಕಾಕಾ ಮಾವುಲಿ
ಅಜರೆಕರ್, ಇವರಿಂದ ಕೀರ್ತನ ಕಾರ್ಯಕ್ರಮ ಬೆಳಗೆ ಜರುಗಲಿದೆ.
10.30 ಗಂಟೆಗೆ ಸಮಾರೋಪ ಕಾರ್ಯಕ್ರಮ ನಿಮಿತ್ಯವಾಗಿ ಕಾರ್ಯಕ್ರಮದ ಸಂಯೋಜಕರಾದ ರಮೇಶ್ ಲ್ಯಾಂಡಗೆ ಇವರಿಂದ ಕಾಲಾ ಕೀರ್ತನ್ ಕಾರ್ಯಕ್ರಮ ಜರಗಲಿದೆ.

ಅಂಕಲಿಕರ್ ಸರ್ಕಾರ್ ಇವರ ಮಾಹುಲಿ ಅಶ್ವ ದೊಂದಿಗೆ ದಿಂಡಿ ಮತ್ತು ರಿಂಗನ ಕಾರ್ಯಕ್ರಮ ಜರಗಲಿದೆ.

ಪ್ರತಿ ದಿನ ಕಾರ್ಯಕ್ರಮ ನಿಮಿತ್ಯ ಆಗಮಿಸುವ ಎಲ್ಲ ಸದ್ಭಕ್ತರಿಗೆ ಮಹಾಪ್ರಸಾದ ಹಾಗೂ ನಾಷ್ಟಾವಸ್ಥೆ, ಮಾಡಲಾಗಿದೆ ಎಂದು ಸಂಯೋಜಕ ರಮೇಶ್ ಲಾಂಡಗೆ ತಿಳಿಸಿದರು.

ಈ ಕಾರ್ಯಕ್ರಮದ ಸಂಪೂರ್ಣವಾಗಿ ವಿವರ ಕಾಗವಾಡ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಅರುಣ್ ಜೋಶಿ ನೀಡಿದರು.

ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಸಮಿತಿ ಸದಸ್ಯರಾದ ದೀಪಕ್ ಮೋರೆ, ಪ್ರವೀಣ ಪಾಟೀಲ್, ರಮೇಶ್ ಪವಾರ್, ನೇತಾಜಿ ಕಾಟೆ, ಬಾಜಿರಾವ್ ಮೋರೆ, ವಿಲಾಸ್ ಪಾಟೀಲ್, ಅನ್ನಾಸಾಹೇಬ್ ಪಾಟೀಲ್, ಚಿದಾನಂದ ಆವಟಿ. ಸೇರಿದಂತೆ ಅನೇಕರು ಸಹಕರಿಸುತ್ತಿದ್ದಾರೆ.

Tags:

error: Content is protected !!