State

ನವೀಕೃತ ಸ್ವಾಗತ ಕೇಂದ್ರ ಹಾಗೂ ‘ಕಾಮದೇನು ಗೋಶಾಲೆ ಲೋಕಾರ್ಪಣೆ…

Share

ಬೆಂಗಳೂರಿನ ಲೋಕಭವನವೀಗ ಹೈಟೆಕ್ ಸ್ಪರ್ಶದೊಂದಿಗೆ ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವೀಕೃತ ಸ್ವಾಗತ ಕೇಂದ್ರ ಹಾಗೂ ನೂತನ ‘ಕಾಮದೇನು ಲೋಕ ಗೋಶಾಲೆ’ಯನ್ನು ಅದ್ಧೂರಿಯಾಗಿ ಉದ್ಘಾಟಿಸಿದರು. ಈ ಸುಸಜ್ಜಿತ ಕೇಂದ್ರಗಳು ಸಾರ್ವಜನಿಕರ ಬಳಕೆಗೆ ಇಂದಿನಿಂದ ಮುಕ್ತವಾಗಿವೆ.

ಆಡಳಿತಾತ್ಮಕ ಸೌಕರ್ಯ ಹಾಗೂ ಗೋಸಂರಕ್ಷಣೆಯ ಉದ್ದೇಶದೊಂದಿಗೆ ಲೋಕಭವನದಲ್ಲಿ ಹಮ್ಮಿಕೊಂಡಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ರಿಬ್ಬನ್ ಕತ್ತರಿಸುವ ಮೂಲಕ ನೂತನ ಕೇಂದ್ರಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯಪಾಲರಾದ ಥೇವರ್ ಚಂದ್ ಗೆಹ್ಲೋತ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಕಳೆ ನೀಡಿತ್ತು.

ನವೀಕೃತಗೊಂಡ ಸ್ವಾಗತ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದರೆ, ‘ಕಾಮದೇನು ಲೋಕ ಗೋಶಾಲೆ’ ಗೋವಿನ ಮಹತ್ವ ಸಾರುವ ನಿಟ್ಟಿನಲ್ಲಿ ನಿರ್ಮಾಣವಾಗಿದೆ.

ಸಮಾರಂಭದಲ್ಲಿ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮತ್ತು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ನೂತನ ಕಾಮಗಾರಿಗಳನ್ನು ವೀಕ್ಷಿಸಿದರು.

Tags:

error: Content is protected !!