ಮಾಜಿ ಸಚಿವ ಡಿ. ಸುಧಾಕರ್ ಪ್ರಕರಣ ಹಾಗೂ ಆರ್.ಸಿ.ಬಿ ಪಂದ್ಯದ ಟಿಕೆಟ್ ಬ್ಲಾಕ್ ದಂಧೆ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ ಇಂದು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಸುಧಾಕರ್ ವಿಚಾರದಲ್ಲಿ ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು ನೀಡಿರುವ ಅವರು, ಇಂತಹ ಸಂದರ್ಭದಲ್ಲಿ ರಾಜಕೀಯಕ್ಕಿಂತ ಮಾನವೀಯತೆ ಮುಖ್ಯ ಎಂದಿದ್ದಾರೆ.

ಮಾಧ್ಯಮಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ಅವರು ಡಿ. ಸುಧಾಕರ್ ಅವರ ವಿಚಾರದಲ್ಲಿ ಸರ್ಕಾರ ಏನೋ ಮುಚ್ಚಿಡುತ್ತಿದೆ ಎಂಬ ಟೀಕೆಗೆ, ಇಂತಹ ವಿಚಾರದಲ್ಲಿ ಮಾನವಿಯತೆ ತೋರಬೇಕು. ಸುಧಾಕರ್ ಕಷ್ಟದಲ್ಲಿದ್ದಾರೆ. ಕಾಯ್ದು ನೋಡೋಣ ಎಂದರು.
ಆರ್.ಸಿ.ಬಿ ಮ್ಯಾಚ್ ಟಿಕೇಟ್ ಬ್ಲಾಕ್ ದಂಧೆಗೆ ಕೆ.ಎಸ್.ಸಿ.ಆರ್. ಸದಸ್ಯರ ಕೈವಾಡದ ಕುರಿತು ಕೇಳಿದ ಪ್ರಶ್ನೆಗೆ ಒಂದು ವೇಳೆ ಈ ರೀತಿ ಮಾಡಿ ಎಫ್.ಐ.ಆರ್ ದಾಖಲಾಗಿದ್ದರೇ ಖಂಡಿತವಾಗಿಯೂ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಆನಲೈನ್ ಟಿಕೇಟ್ ನಮಗೆ ಸಂಬಂಧವಿಲ್ಲ.
