ಭಾರತದಾದ್ಯಂತ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಗೋಮಾತೆಗೆ ರಾಷ್ಟ್ರೀಯ ಮಟ್ಟದ ಗೌರವ ದೊರಕಿಸಿ ಕೊಡಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ಇಂದು ಗೋರಕ್ಷಕರು ಮತ್ತು ವಿವಿಧ ಸಂಘಟನೆಗಳು ಗೋ ಸಮ್ಮಾನ್ ಆಹ್ವಾನ ಅಭಿಯಾನವನ್ನು ನಡೆಸಲಾಯಿತು.


ಇಂದು ಬೆಳಗಾವಿಯಲ್ಲಿ ಗೋರಕ್ಷಕರಿಂದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಯಿತು. ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತಲುಪಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀ ಗೌರವಾನಂದ ಸರಸ್ವತಿ ಸ್ವಾಮಿಜೀಗಳು ಗೋಮಾತೆಗೆ ಸುರಕ್ಷತೆ-ಸೇವೆ ನೀಡಬೇಕು. ಭಾರತದಾದ್ಯಂತ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಗೋಮಾತೆಗೆ ರಾಷ್ಟ್ರೀಯ ಮಟ್ಟದ ಗೌರವ ದೊರಕಿಸಿ ಕೊಡಬೇಕೆಂದು ಆಗ್ರಹಿಸಿ ಇಂದು ಸರ್ಕಾರಕ್ಕೆ ಮನವಿಯನ್ನು ನೀಡಲಾಗುತ್ತಿದೆ. ಸ್ವಾತಂತ್ರ್ಯ ಭಾರತದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದರು.
ಇನ್ನೋರ್ವ ಪ್ರತಿಭಟನಾಕಾರರು ಮಾತನಾಡಿ ಗೋವಿಗೆ ರಾಷ್ಟ್ರಮಟ್ಟದ ಗೌರವ ದೊರಕಿಸಿ ಕೊಡಬೇಕು. ದೇಶ ಸ್ವಾತಂತ್ರ್ಯಗೊಂಡು 70 ವರ್ಷಗಳು ಕಳೆದರೂ ಸಹ ಗೋಹತ್ಯೆ ನಿಲ್ಲದಾಗಿದೆ. ಇದನ್ನ ತಡೆಗಟ್ಟಲೂ ಕಠಿಣ ಕಾನೂನು ಜಾರಿಯಾಗಬೇಕು. ಗೋವನ್ನು ರಾಷ್ಟ್ರಮಾತೆ ಎಂದು ಘೋಷಿಸಬೇಕೆಂದರು.
ಈ ಸಂದರ್ಭದಲ್ಲಿ ಗೋರಕ್ಷಕ ನಿಲೇಶ್, ಹರಿನಾಮ, ರವಿಕುಮಾರ್ ಕೋಕಿತಕರ, ಕಿರಣ್ ಗಾವಡೆ, ಮಾರುತಿ ಕೋಳಿ, ಆನಂದ ಶೆಟ್ಟಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
