Belagavi

ಕಣಬರ್ಗಿಯಲ್ಲಿ ಬುಡಾ ಯಡವಟ್ಟು: ರೈತರ ಜಮೀನಿಗೆ ಕೊಳಚೆ ನೀರು; ಉಗ್ರ ಹೋರಾಟದ ಎಚ್ಚರಿಕೆ

Share

ಬುಡಾ ಮತ್ತು ಖಾಸಗಿ ಲೇಔಟ್’ನಿಂದಾಗಿ ರೈತರ ಜಮೀನುಗಳಿಗೆ ನಾಲೆಯ ನೀರನ್ನು ತಿರಿಗಿಸಲಾಗಿದ್ದು, ಬೆಳೆಹಾನಿಗೊಳಗಾಗುತ್ತಿರುವ ಕಣಬರ್ಗಿಯ ರೈತರು ಸಮಸ್ಯೆ ನೀಗಿಸದಿದ್ದರೇ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಳಗಾವಿಯ ಕಣಬರ್ಗಿಯಲ್ಲಿ ಬುಡಾ ಮತ್ತು ಖಾಸಗಿಯವರು ಲೇಔಟ್ ನಿರ್ಮಿಸಿದ್ದಾರೆ. ಈ ವೇಳೆ ನಾಲೆಯ ನೀರು ಹರಿದು ಹೋಗಲು ಅವೈಜ್ಞಾನಿಕ ಕಾಮಗಾರಿಯನ್ನು ಕೈಗೊಂಡಿದ್ದು, ಕೊಳಚೆ ನೀರು ರೈತರ ಜಮೀನುಗಳಿಗೆ ನುಗ್ಗುತ್ತಿದೆ. ಈ ಹಿನ್ನೆಲೆ ರೈತರು ಬೆಳೆದ ಬೆಳೆ ಹಾಳಾಗುತ್ತಿದ್ದು, ಶ್ರೀ ಸಿದ್ಧೇಶ್ವರ ಶೇತಕರಿ ಸಂಘಟನೆಯೂ ಪ್ರತಿಭಟನೆಯನ್ನು ನಡೆಸಿದೆ. ಕೂಡಲೇ ನಾಲೆಯ ನೀರನ್ನು ನಿಯಂತ್ರಿಸದಿದ್ದರೇ, ಉಗ್ರ ಹೋರಾಟ ನಡೆಸಲಾಗುವುದೆಂದು ರೈತರು ಎಚ್ಚರಿಕೆಯನ್ನು ನೀಡಿದ್ದಾರೆ. ಬೈಟ್

ಈ ಸಂದರ್ಭದಲ್ಲಿ ಬಬನ್ ಮಾಲಾಯಿ, ನಾರಾಯಣ್ ಪಾಟೀಲ್, ಮಾರುತಿ ಪಾಟೀಲ್. ವಿಠ್ಠಲ ಅಷ್ಠೇಕರ, ಕಿಸನ್ ದಡ್ಡಿಕರ, ಗುರುನಾಥ್ ದಡ್ಡಿಕರ, ರವಳು ಮುಚ್ಚಂಡಿಕರ, ಪೀರಾಜೀ ಕೇಸರಕರ, ಸುನೀಲ್ ದಡ್ಡಿಕರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು

Tags:

error: Content is protected !!