Dharwad

ಧಾರವಾಡ ಮದಿಹಾಳ ಕ್ರಾಸ್ ಬಳಿಯ ಸಾರಿಗೆ ಡಿಪೋ ಸಮೀಪ ಕಸದ ಗುಡ್ಡೆಗೆ ಬೆಂಕಿ, ಸ್ಥಳೀಯರಲ್ಲಿ ಆತಂಕ ಸೃಷ್ಟಿ….. ಬೆಂಕಿ ನಂದಿಸಿದ ಅಗ್ನಿ ಶಾಮಕ ದಳ, ನಿಟ್ಟುಸಿರು ಬಿಟ್ಟ ಸ್ಥಳೀಯರು..

Share

ಧಾರವಾಡ: ಕಿಡಗೇಡಿಗಳು ಕಸದ ಗುಡ್ಡೆಗೆ ಬೆಂಕಿ ಹಚ್ಚಿದ ಪರಿಣಾಮ ಸ್ಥಳೀಯರು ಕೆಲಕಾಲ‌ ಆತಂಕಕ್ಕೆ ಒಳಗಾದ ಘಟನೆ ಧಾರವಾಡದ ನಗರದಲ್ಲಿಂದು‌ ನಡೆದಿದ್ದು, ಅಗ್ನಿ ಶಾಮಕದಳದ ಸಿಬ್ಬಂದಿಯವರು‌ಕಾರ್ಯಾಚರಣೆ ನಡೆಸಿ‌ ಸ್ಥಳೀಯರ ಆತಂಕ ದೂರು ಮಾಡಿದ್ದಾರೆ.

ಧಾರವಾಡ ಮದಿಹಾಳ ಕ್ರಾಸ್‌ನಿಂದ ಹೆಬ್ಬಳ್ಳಿ ಅಗಸಿಗೆ ಸಂಪರ್ಕ ಕಲ್ಪಿಸುವ ಡಿಪೋ ಸಮೀಪ ಈ ದುರ್ಘಟನೆ ಸಂಭವಿಸಿದೆ. ಡಿಪೊ ಬಳಿಯ ರಾಜಕಾಲುವೆಯಲ್ಲಿ ಕಸದ ಗುಡ್ಡೆ ಬಿದಿದ್ದತ್ತು. ಎರಡೂ ಬದಿ ಇದ್ದ ಕಸದ ಗುಡ್ಡೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಹೋಗಿದ್ದರು. ಆ ಬೆಂಕಿ ದೊಡ್ಡ ಪ್ರಮಾಣದಲ್ಲೇ ಹಬ್ಬಿತ್ತು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಬೆಂಕಿ ಕೆನ್ನಾಲಿಗೆ ಚಾಚುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಮಾಹಿತಿ ಮುಟ್ಟಿಸಿದ್ದರಿಂದ, ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕೊನೆಗೂ ಅರ್ಧ ಗಂಟೆ ಕಾರ್ಯಾಚರಣೆ ನಡರಸಿ ಬೆಂಕಿ ನಂದಿಸಿದ್ದಾರೆ. ಸದ್ಯ ಸ್ಥಳೀಯರು ನಿಟ್ಟಿಸಿರು ಬಿಟ್ಟಿದ್ದಾರೆ.

Tags:

error: Content is protected !!