Dharwad

ಧಾರವಾಡದಲ್ಲಿ ಅಪ್ರಾಪ್ತ ಮಗನ ಕೈಗೆ ಬೈಕ್ ಕೊಟ್ಟ ತಪ್ಪಿಗೆ ಭಾರೀ ದಂಡ ಭರಿಸಿದ ತಂದೆ.

Share

ತಮ್ಮ ಅಪ್ರಾಪ್ತ ಮಗನ ಕೈಗೆ ಬೈಕ್‌ ಕೊಟ್ಟ ತಪ್ಪಿಗೆ ಪಾಲಕರೊಬ್ಬರು ಭಾರಿ ಪ್ರಮಾಣದ ದಂಡ ಭರಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಮೈನುದ್ದೀನ್ ಜಲಾಲದಾರ ಎಂಬುವರೇ ಬಾರಿ ದಂಡ ಭರಿಸಿದ ಪಾಲಕರು. ಅವರ ಅಪ್ರಾಪ್ತ ಮಗ ಬೈಕ್‌ ಚಲಾಯಿಸುವಾಗ ಪೊಲೀಸರಿಗೆ ಸಿಕ್ಕು ಬಿದ್ದಿದ್ದನು. ನಂತರ ಪೊಲೀಸರು ಸಂಚಾರಿ ನಿಯಮಾನುಸಾರ ದಂಡ ವಿಧಿಸಿದ್ದರು.

ಧಾರವಾಡದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಪಾಲಕರು 26 ಸಾವಿರ ರೂಪಾಯಿ ದಂಡ ಭರ್ತಿ ಮಾಡಿದ್ದಾರೆ. ಬಳಿಕ ಪೊಲೀಸರು ಬೈಕ್ ಮಾಲೀಕರಿಗೆ ಸಂಚಾರಿ ನಿಯಮಗಳ ಮಾಹಿತಿ ನೀಡಿ ಕಳಿಸಿದ್ದಾರೆ. ಸಂಚಾರಿ ಠಾಣೆಯ ಸಿಪಿಐ ಶ್ರೀನಿವಾಸ ಮೇಟಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿ.ಐ.ಬಳ್ಳಾರಿ ಅವರು ಕ್ರಮ ಕೈಕೊಂಡಿದ್ದರು.

Tags:

error: Content is protected !!