ಧಾರವಾಡ ವಿದ್ಯಾಗಿರಿ ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಸೇರಿ ಡ್ರಗ್ ಟೆಸ್ಟಿಂಗ್ ಸಂದರ್ಭದಲ್ಲಿ ನೆಗೆಟಿವ್ ಬಂದ ವಿದ್ಯಾರ್ಥಿ ಹೆಸರನ್ನು ಕೈಬಿಡಲು ಮಧ್ಯ ವರ್ತಿಗಳ ಮೂಲಕ ಪೊಲೀಸ ಸಿಬ್ಬಂದಿ 2ಸಾವಿರ ಹಣಕ್ಕೆ ಬೇಡಿಕೆ ಇಟ್ಟಿರುವ ನಡೆ ಖಂಡಿಸಿ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಹಾಗೂ ಕುಟುಂಬಕ್ಕೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ, ಧಾರವಾಡದಲ್ಲಿ ಬೀದಿಗರ ಇಳಿದು ಪ್ರತಿಭಟನರ ನಡೆಸಲಾಯಿತು.

ಸಮಾನ ಮನಸ್ಕರ ವೇದಿಕೆಯ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ವೇದಿಕೆಯ ಪದಾಧಿಕಾರಿಗಳು, ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ(20) ಆತ್ಮಹತ್ಯೆಗೆ ಕಾರಣವಾದ ವಿದ್ಯಾಗಿರಿ ಠಾಣೆಯ ಕೆಲವು ಪೊಲೀಸ ಸಿಬ್ಬಂದಿ ವಿರುದ್ಧ ಸೇರಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಶನಿವಾರದಂದು ಡ್ರಗ್ ಸೇರಿ ಗಾಂಜಾ ಟೆಸ್ಟಿಂಗ್‌ಗಾಗಿ ಆತ್ಮಹತ್ಯೆ ಮಾಡಿಕೊಂಡ ಆದಿತ್ಯನನ್ನು ವಿದ್ಯಾಗಿರಿ ಠಾಣೆಯ ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು. ಟೆಸ್ಟಿಂಗ್ ನಡೆಸಿದ ನಂತರ ಆದಿತ್ಯ ಗಾಂಜಾ, ಡ್ರಗ್ ನೆಗಟಿವ್ ವರದಿ ಬಂದಿತ್ತು. ಆದರೆ ಆದಿತ್ಯನ ವರದಿ ನೆಗಟಿವ್ ಬಂದರು ಕೂಡಾ ಪೊಲೀಸ್ ಸಿಬ್ಬಂದಿ ಮಧ್ಯವರ್ತಿಗಳ ಮೂಲಕ ಎರಡು ಸಾವಿರಕ್ಕೆ ನಿರಂತರವಾಗಿ ಬೇಡಿಕೆ ಇಟ್ಟಿದ್ದಾರೆ. ಈ ಕಿರುಕುಳದಿಂದ ಬೇಸತ್ತ ಧಾರವಾಡ ಕಿಟೆಲ್ ಕಾಕೇಜಿನ ಬಿಎಸ್ಸಿ ವಿದ್ಯಾರ್ಥಿ ಆದಿತ್ಯ ಆತ್ಮಹತ್ಯೆ ಶರಣಾಗಿದ್ದಾನೆ. ತಂದೆ ಇಲ್ಲದ ಒಬ್ಬನೇ ಮಗನನ್ನು ಪೊಲೀಸ್ ಹಣಧಾಸೆ ಬಲಿ ಪಡೆದಿದೆ. ಈ ಕೂಡಲೇ ಆತ್ಯಹತ್ಯೆಗೆ ಕಾರಣವಾಗಿರುವ ಪೊಲೀಸ್ ಸುಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಜತೆಗೆ ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ರಾಜ್ಯ ವ್ಯಾಪಿ ಹೋರಾಟಕ್ಕೆ ಮುಂದಾಗುವುದಾಗಿ ಖಡಕ್ ಎಚ್ಚರಿಕೆ ನೀಡಿದರು.

