ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ ಗ್ರಾಮದಲ್ಲಿ ಭಕ್ತಿಯ ಪರಕಾಷ್ಠೆ ಮೆರೆಯುತ್ತಿದೆ. ದಶಕಗಳ ಸುದೀರ್ಘ ಕಾಯುವಿಕೆಯ ನಂತರ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀಯ ಜಾತ್ರೋತ್ಸವ ಅದ್ಧೂರಿಯಾಗಿ ಆರಂಭಗೊಂಡಿದ್ದು, ಇಂದು ನಡೆದ ಬೃಹತ್ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.


ಸುಮಾರು 43 ಕ್ಕೂ ಅಧಿಕ ವರ್ಷಗಳ ಬಳಿಕ ನಡೆಯುತ್ತಿರುವ ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀಯ ಜಾತ್ರೋತ್ಸವಕ್ಕೆ ಮಂಗಳವಾರದಿಂದ ಚಾಲನೆ ದೊರೆತಿದೆ. ಮಂಗಳವಾರ ಅಕ್ಷತಾರೋಪಣದ ಬಳಿಕ ಇಂದು ಬುಧುವಾರ ಬೆಳಿಗ್ಗೆ ದೇವಿಯ ಬೃಹತ್ ರಥೋತ್ಸವಕ್ಕೆ ಚಾಲನೆ ದೊರೆತಿದೆ.


ಭಂಡಾರವನ್ನು ಉಗ್ಗುತ್ತ ಶ್ರೀ ಮಹಾಲಕ್ಷ್ಮೀ ಮಾತಾ ಕೀ ಜೈ ಎನ್ನುತ್ತ ಭಕ್ತರು ದೇವಿ ರಥವನ್ನು ಎಳೆದರು. ಶ್ರೀ ಗಣೇಶ, ಶ್ರೀ ಕಲಮೇಶ್ವರ ಮಂದಿರದಿಂದ ರಥೋತ್ಸವ ಆರಂಭಗೊಂಡಿತು. ಗ್ರಾಮದಾದ್ಯಂತ ದೇವಿಯ ಈ ರಥವು ಸಂಜೆಯ ವರೆಗೂ ಸಂಚರಿಸಲಿದೆ. ಸಹಸ್ರಾರು ಜನರು ದೇವಿಯ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ವಿಷ್ಣುಪ್ರಿಯೆಯನ್ನು ಪ್ರಾರ್ಥಿಸಿದರು.

ಸುಮಾರು 2 ತಿಂಗಳುಗಳಿಂದ ಭಕ್ತರು ದೇವಿಯ ಜಾತ್ರೆಗೆ ಪೂರ್ವಸಿದ್ಧತೆಯನ್ನು ಮಾಡಿಕೊಂಡಿದ್ದು, ಇಂದು ರಥೋತ್ಸವವು ಅತ್ಯಂತ ಉತ್ಸಾಹದಿಂದ ನಡೆಯುತ್ತಿದೆ. ತಾಯಿ ಮಹಾಲಕ್ಷ್ಮೀಯೂ ನಮ್ಮ ಗ್ರಾಮಕ್ಕೆ ಸುಖ ಶಾಂತಿಯನ್ನು ನೀಡಲಿ ಎಂದು ಭಕ್ತರು ಪ್ರಾರ್ಥಿಸುತ್ತಿದ್ದಾರೆ.
ಹೊನ್ನಾಟದ ಈ ಸಂದರ್ಭದಲ್ಲಿ ಸಹಸ್ರಾರು ಜನರು ಕಂಗ್ರಾಳಿ ಬಿ.ಕೆ ಗ್ರಾಮಕ್ಕೆ ಆಗಮಿಸಿದ್ದಾರೆ. ದೇವಿಯೂ ರೈತರಿಗೆ ಜನ ಸಾಮಾನ್ಯರ ಎಲ್ಲ ದುಃಖ ದುಮ್ಮಾನಗಳನ್ನು ದೂರವಾಗಿಸಿ ಸಮೃದ್ಧಿಯನ್ನು ನೀಡಲಿ. ಗ್ರಾಮಕ್ಕೆ ನೆಂಟರಿಷ್ಟರೂ ಆಗಮಿಸಿದ್ದು, 43 ವರ್ಷದ ಹಿಂದೆ ಈ ದೇವಿಯ ಜಾತ್ರೆಗೆ ಸಾಕ್ಷಿಯಾದವರೂ ಈಗ ಎರಡನೇ ಬಾರಿ ದೇವಿಯ ಜಾತ್ರೆಯಲ್ಲಿ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದರು.

ಇನ್ನು ಯಲ್ಲೋಜೀ ಪಾಟೀಲ್ ಅವರು ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀಯ ಜಾತ್ರೆಯೂ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಗ್ರಾಮಸ್ಥರು, ಪಂಚ ಕಮೀಟಿ, ಗ್ರಾಮ ಪಂಚಾಯತ ಮತ್ತು ಈ ಭಾಗದ ಶಾಸಕರಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಹಯೋಗ ನೀಡಿದ್ದಾರೆ. 9 ದಿನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಇಂದುಮತಿಯ ಇಂದಿನ ಈ ರಥೋತ್ಸವದಲ್ಲಿ ಸಹಸ್ರಾರು ಸಹಸ್ರಾರು ಜನರು ಭಾಗಿಯಾಗಿ ದರ್ಶನ ಪಡೆದು ಪುನೀತರಾದರು.
