• ಸೇನೆಯಲ್ಲಿ 24 ವರ್ಷಗಳ ಸುದೀರ್ಘ ಸೇವೆ
• ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ
• ಸಿಯಾಚಿನ್ ಗಡಿಯಲ್ಲಿ ಕಾದಿದ್ದ ವೀರ ಯೋಧ
• ಯೋಧನ ಸ್ವಾಗತಕ್ಕೆ ಕಲ್ಲೂರು ಗ್ರಾಮ ಸಂಭ್ರಮ

ಭಾರತೀಯ ಸೇನೆಯಲ್ಲಿ ಸುದೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ಮರಳಿ ಸ್ವಗ್ರಾಮಕ್ಕೆ ಬಂದ ಯೋಧನಿಗೆ ಧಾರವಾಡದ ಕಲ್ಲೂರು ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.

ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದ ಮಹ್ಮದ್‌ಸಾದಿಕ್ ಹಂಚಿಮನಿ ಊರ್ಫ್ ಸೈಯದ್‌ನವರ ಯೋಧ ಭಾರತೀಯ ಸೇನೆಯಲ್ಲಿ ಸುದೀರ್ಘ 24 ವರ್ಷ ಸೇವೆ ಸಲ್ಲಿಸಿ ಮರಳಿ ಸ್ವಗ್ರಾಮಕ್ಕೆ ಬಂದಿದ್ದಾರೆ. ಮರಾಠಾ ಲೈಫ್ ಇನ್‌ಫೆಂಟರಿ ರೆಜೆಂಟ್ ಮೂಲಕ ಭಾರತೀಯ ಸೇನೆ ಸೇರಿದ ಮಹ್ಮದ್‌ಸಾದಿಕ್ ಅವರು ಮಣಿಪುರ, ಸೌತ್‌ಸುಡಾನ್, ಅಸ್ಸಾಂ, ಜಮ್ಮು ಕಾಶ್ಮೀರ, ಸಿಯಾಚಿನ್ ಸೇರಿದಂತೆ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅನೇಕ ಯುದ್ಧದ ಸನ್ನಿವೇಶ ಹಾಗೂ ಆಪರೇಶನ್‌ಗಳೂ ಮಹ್ಮದಸಾದಿಕ್ ಪಾಲ್ಗೊಂಡಿದ್ದರು. ಕಳೆದ ಶುಕ್ರವಾರ ಸೇವೆಯಿಂದ ನಿವೃತ್ತಿ ಹೊಂದಿ ಮರಳಿ ತಮ್ಮ ಸ್ವ ಗ್ರಾಮವಾದ ಕಲ್ಲೂರಿಗೆ ಬಂದ ಯೋಧ ಮಹ್ಮದ್‌ಸಾದಿಕದ ಅವರನ್ನು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಅದ್ದೂರಿಯಾಗಿ ಬರಮಾಡಿಕೊಳ್ಳುವ ಮೂಲಕ ಗೌರವಿಸಿದರು.
