Accident

ಧಾರವಾಡದ ಕಲಘಟಗಿ ರಸ್ತೆಯಲ್ಲಿ ಭೀಕರ ದುರಂತ….. ಲಾರಿ ಟಿಟಿ ವಾಹನ ಮಧ್ಯೆ ಅಪಘಾಯ 3 ವರ್ಷದ ಕಂದಮ್ಮ ಸಾವು, 9 ಜನರಿಗೆ ಗಂಭೀರ ಗಾಯ.

Share

ಹುಬ್ಬಳ್ಳಿ ಕಲಘಟಗಿ ರಸ್ತೆಯಲ್ಲಿ ಟಿ ಟಿ ವಾಹನ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಟಿ ಟಿ ವಾಹನದಲ್ಲಿದ್ದ 3 ವರ್ಷದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಳೆದ ದಿನ ರಾತ್ರಿ ಕಲಘಟಗಿಯ ಉಗ್ಗಿನಕೆರಿ ಹತ್ತಿರ ನಡೆದಿದೆ.

ಕಲಘಟಗಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಹೊರಟಿದ್ದ ಟಿ ಟಿ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಪಲ್ಟಿಯಾಗಿದೆ, ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಟಿ ಟಿ ವಾಹನದಲ್ಲಿದ್ದ 3 ವರ್ಷದ ಮಗು ಸಾವನ್ನಪ್ಪಿದರೆ ಇನ್ನುಳಿದ ಸುಮಾರು 10 ಜನಕ್ಕೆ ಗಂಭೀರವಾಗಿ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕಿಮ್ಸ್ ಗೆ ರವಾನೆ ಮಾಡಿದ್ದಾರೆ. ಇನ್ನೂ ಟಿ ಟಿ ವಾಹನದವರು ಹೊಸಪೇಟೆ ಮೂಲದವರೆಂದು ತಿಳಿದು ಬಂದಿದೆ.

 

ಇನ್ನೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪೊಲೀಸರ ಪ್ರಾಥಮಿಕ ತನಿಖೆಯ ಬಳಿಕ ಗಾಯಾಳುಗಳ ಹೆಸರು ಮಾಹಿತಿ ತಿಳಿದು ಬರಬೇಕಿದೆ.

 

 

Tags:

error: Content is protected !!