ಹುಕ್ಕೇರಿ ನಗರದ ವಿಜಯ ರವದಿ ಸಮಾಜ ಸೇವಾ ಸಂಘದಿಂದ ಬಸವ ಜಯಂತಿ ಅಂಗವಾಗಿ ನಗರದ ಹಡಪದ ಅಪ್ಪಣ್ಣ ಸಮಾಜದ ಕಾಯಕ ಯೋಗಿಗಳಿಗೆ ಪರಿಕರಣ ಮತ್ತು ನಗರದ ವಿವಿಧ ದೇವಾಲಯಗಳಿಗೆ ಸ್ಚಚ್ಚತಾ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಯಿತು.

ಸಂಘದ ಅದ್ಯಕ್ಷ ವಿಜಯ ರವದಿ ತಮ್ಮ ಫಾರ್ಮ ಹೌಸದಲ್ಲಿ ಬಸವೇಶ್ವರರ ಪುತ್ಥಳಿಗೆ ಪೂಜೆ ಸಲ್ಲಿಸಿ ಕಾಯಕ ಯೋಗಿಗಳಿಗೆ ಪರಿಕರಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಗವಿಶ ರವದಿ ಸೇರಿದಂತೆ ವಿಜಯ ರವದಿ ಸಮಾಜ ಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.
