ಖಾನಾಪೂರ ತಾಲ್ಲೂಕಿನಲ್ಲಿ ಎರಡು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆಗಳು ಕುಸಿದು ಬಿದ್ದಿವೆ.
ವಾಡಿಕೆಗೂ ಮೀರಿ ಮಳೆ ಆಗುತ್ತಿರುವುದರಿಂದ ಖಾನಾಪೂರ ತಾಲೂಕು ವ್ಯಾಪ್ತಿಯ ಗ್ರಾಮದಲ್ಲಿ ಮನೆಯ ಹಿಂಭಾಗದ ಗೋಡೆ ಕುಸಿದು ಬಿದ್ದಿದೆ. ಖಾನಾಪೂರ ತಾಲ್ಲೂಕಿನಲ್ಲಿ ವಾಡಿಕೆಗಿಂತ. ಸರಾಸರಿ 22.3 ಮಿ.ಮೀ. ಮಳೆ ಆಗಿದೆ. 7 ದಿನಗಳಲ್ಲಿಶೇ 111 ರಷ್ಟು ಹೆಚ್ಚಾಗಿದೆ.
ಇನ್ನೂ ಅಧಿಕಾರಿ ಮಾತನಾಡಿ ಖಾನಾಪುರ ತಾಲ್ಲೂಕಿನಾಧ್ಯಂತ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯದ ನೀರಿನ ಮಟ್ಟ ಕೂಡ ಏರಿಕೆಯಾಗಿದೆ. ಇದರ ಗರಿಷ್ಠ ಸಾಮರ್ಥ್ಯ-37.731 ಟಿಎಂಸಿ, ಇಂದಿನ – ಇಂದಿನ ಮಟ್ಟ-2052.00, ಒಳ ಹರಿವು- 8504 ಕ್ಯೂಸೆಕ್, ಹೊರ ಹರಿವು 194 ಕ್ಯೂಸೆಕ್ ಇದೆ. ಕಳೆದ ವರ್ಷ ಈ ದಿವಸ 6.838 ಟಿಎಂಸಿ ನೀರು ಸಂಗ್ರಹವಾಗಿತ್ತು ಎಂದು ಹೇಳಿದ್ದರು .