Khanapur

ಖಾನಾಪುರದ ಗರ್ಲಗುಂಜಿ ಮಾವುಲಿ ಸ್ಪೋರ್ಟ್ಸ್ ಕ್ಲಬ್‌ನ ಹೊಸ ಜರ್ಸಿ ಅನಾವರಣ: ಸತತ ಗೆಲುವಿನ ಓಟಕ್ಕೆ ಶುಭ ಹಾರೈಕೆ

Share

ಖಾನಾಪುರ ತಾಲೂಕಿನ ಗರ್ಲಗುಂಜಿಯ ಮಾವುಲಿ ಸ್ಪೋರ್ಟ್ಸ್ ಕ್ಲಬ್‌ನ ೨೦೨೬-೨೭ರ ಸಾಲಿನ ಕ್ರಿಕೆಟ್ ಪಂದ್ಯಾವಳಿಗಳ ಹೊಸ ಜರ್ಸಿಯನ್ನು ಅದ್ಧೂರಿಯಾಗಿ ಲೋಕಾರ್ಪಣೆ ಮಾಡಲಾಗಿದೆ. ಗ್ರಾಮದ ಮಾರುತಿ ಮಂದಿರದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರು ಪಾಲ್ಗೊಂಡು ತಂಡದ ಮುಂದಿನ ಸರಣಿ ಪಂದ್ಯಗಳಿಗೆ ಶುಭ ಹಾರೈಸಿದರು.

ಮಾಚಿಗಡ, ನಂದಗಡ, ಜಾಂಬೋಟಿ, ಹಲ್ಸಾಲ್ ಸೇರಿದಂತೆ ಹಲವೆಡೆ ನಡೆದ ಫುಲ್ ಪಿಚ್ ಹಾಗೂ ಹಾಫ್ ಪಿಚ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪ್ರಥಮ ಸ್ಥಾನ ಪಡೆದು ವಿಜಯಯಾತ್ರೆ ಮುಂದುವರಿಸಿರುವ ಗರ್ಲಗುಂಜಿ ಮಾವುಲಿ ಸ್ಪೋರ್ಟ್ಸ್ ಕ್ಲಬ್‌ಗೆ ಜರ್ಸಿ ಪ್ರಾಯೋಜಕರಾದ ಮಾಜಿ ಗ್ರಾ.ಪಂ. ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಸಾದ್ ಪಾಟೀಲ್ ಜರ್ಸಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಕರು ವ್ಯಸನಮುಕ್ತರಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಗ್ರಾಮ ಮತ್ತು ತಾಲೂಕಿಗೆ ಕೀರ್ತಿ ತರಬೇಕು ಎಂದರು. ಕಾರ್ಯಕ್ರಮದಲ್ಲಿ ಪಿ.ಕೆ.ಪಿ.ಎಸ್ ಸೊಸೈಟಿ ಉಪಾಧ್ಯಕ್ಷ ವಿನೋದ ಕುಂಬಾರ, ಆಲ್‌ರೌಂಡರ್ ಪ್ರತಾಪ ಪಾಟೀಲ್, ಪರಶರಾಮ ಆಸ್ಟೇಕರ್, ನಾಯಕ ಸಾಗರ ಕೊಲೇಕರ್, ಪಾಂಡುರಂಗ ಭಾತಕಾಂಡೆ ಸೇರಿದಂತೆ ಆಟಗಾರರಾದ ಯಶ ಚೌಗುಲೆ, ಹರೀಶ ಚೌಗುಲೆ, ಯೋಗೇಶ ಪಾಟೀಲ್, ಮಲ್ಲಪ್ಪ ಪಾಟೀಲ್, ನಿಲೇಶ ನಿಟ್ಟುರಕರ್, ಶ್ರೇಯಶ ನಿಟ್ಟುರಕರ್, ಮಂಥನ ಪಾಟೀಲ್, ಪ್ರಣಯ ಯಲಾರಿಚೆ, ಸಂದೇಶ ಕೊಲೇಕರ್, ಗಣೇಶ ಪಾಖರೆ, ಭುಜಂಗ ಮೇಲಗೆ, ಗಂಧರ್ವ ಬಿರ್ಜೆ, ದತ್ತಾ ಪಾಟೀಲ್, ದತ್ತಾ ದೇಸಾಯಿ, ಏಕಲವ್ಯ ತರಬೇತುದಾರ ಪ್ರಶಾಂತ ಪಾಖರೆ, ಕಲ್ಲಪ್ಪ ಲೋಹಾರ ಮತ್ತು ಅನಂತ ಪಾಟೀಲ್ ಉಪಸ್ಥಿತರಿದ್ದರು.

Tags:

error: Content is protected !!