ಬೆಳಗಾವಿ ನಗರವನ್ನು ಕಾಡುತ್ತಿರುವ ತೀವ್ರ ನೀರಿನ ಅಭಾವಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ಮಹಾರಾಷ್ಟ್ರದ ತಿಲಾರಿ ಜಲಾಶಯದ ಹೆಚ್ಚುವರಿ ನೀರನ್ನು ರಾಕಸಕೊಪ್ಪ ಜಲಾಶಯಕ್ಕೆ ತಿರುಗಿಸುವ ಚಟುವಟಿಕೆಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಮಾಜಿ ನಗರಸೇವಕರ ಸಂಘಟನೆಯು ಸಂಸದ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ವಿವರವಾದ ಮನವಿ ಪತ್ರವನ್ನು ಸಲ್ಲಿಸಿದೆ.

ಇಂದು ಬೆಳಗಾವಿಯ ಸರ್ಕೀಟ್ ಹೌಸಿನಲ್ಲಿ ಈ ಕುರಿತಾದ ಸಭೆಯನ್ನು ಕರೆಯಲಾಗಿತ್ತು. ಬೆಳಗಾವಿ ನಗರದಲ್ಲಿ ಮೇ ತಿಂಗಳಿನಿಂದ ಜುಲೈ ಅವಧಿಯಲ್ಲಿ ರಾಕಸಕೊಪ್ಪ ಮತ್ತು ಹಿಡಕಲ್ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಕುಸಿಯುವುದರಿಂದ ತೀವ್ರ ನೀರಿನ ಅಭಾವ ಸೃಷ್ಟಿಯಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಚಂದಗಡ ತಾಲ್ಲೂಕಿನ ತಿಲಾರಿ ಜಲಾಶಯ ಮತ್ತು ರಾಕಸಕೊಪ್ಪ ಜಲಾಶಯವನ್ನು ‘ರಾಷ್ಟ್ರೀಯ ನದಿ ಜೋಡಣೆ ಯೋಜನೆ’ಯಡಿ ಜೋಡಿಸಬೇಕೆಂದು ಮಾಜಿ ನಗರಸೇವಕರ ಸಂಘಟನೆಯು ಒತ್ತಾಯಿಸಿದೆ.ತಿಲಾರಿ ಜಲಾಶಯದಲ್ಲಿ ಜಲವಿದ್ಯುತ್ ಉತ್ಪಾದನೆಯ ನಂತರ ಮೇ ಮತ್ತು ಜುಲೈ ನಡುವೆ ಭಾರಿ ಪ್ರಮಾಣದಲ್ಲಿ ಹೆಚ್ಚುವರಿ ನೀರು ಲಭ್ಯವಿರುತ್ತದೆ. ಈ ನೀರನ್ನು ರಾಕಸಕೊಪ್ಪ ಜಲಾಶಯಕ್ಕೆ ತಿರುಗಿಸಿದರೆ ಬೆಳಗಾವಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬಹುದು, ಹಾಗೆಯೇ ಮಾರ್ಕಂಡೇಯ ನದಿ ಪಾತ್ರದ ಮೂಲಕ ಈ ನೀರನ್ನು ಕೃಷಿಗೂ ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಬಹುದು ಎಂದು ಮಾಜಿ ನಗರಸೇವಕರ ಸಂಘಟನೆಯ ಅಧ್ಯಕ್ಷ ಶಿವಾಜಿರಾವ್ ಸುಂಠಕರ್ ತಿಳಿಸಿದ್ದಾರೆ.
ಮಾಜಿ ನಗರಸೇವಕ ಲತೀಫ್’ಖಾನ್ ಪಠಾಣ್ ಅವರು ಹಲವಾರು ಬಾರಿ ಈ ಕುರಿತು ಪ್ರಯತ್ನಿಸಲಾಗಿದೆ. ತಿಲಾರಿ ಜಲಾಶಯದ ನೀರನ್ನು ಬೆಳಗಾವಿಗೆ ತಿರುವು ಬೇಕೆಂಬ ಆಶಯವನ್ನು ಜಿಲ್ಲಾ ಉಸ್ತುವಾರಿಗಳೊಂದಿಗೆ ಚರ್ಚಿಸಿ, ಸಂಸತ್ ಅಧಿವೇಶನದಲ್ಲಿಯೂ ಮಂಡಿಸಲಾಗುವುದು ಎಂದಿದ್ದಾರೆ. ಅಲ್ಲದೇ ಮಹಾರಾಷ್ಟ್ರದ ಸಿಎಂ ಹಾಗೂ ಚಂದಗಢ ಶಾಸಕರೊಂದಿಗೆ ಚರ್ಚಿಸಲಾಗುವುದು. ಭಾಷಾ ಅಥವಾ ಗಡಿವಿವಾದವನ್ನು ಇದರಲ್ಲಿ ತರದೇ ಬೆಳಗಾವಿ ನಗರಕ್ಕೆ ನೀರಿನ ಯೋಜನೆಯನ್ನು ಜಾರಿಗೊಳಿಸಬೇಕೆಂದರು.
ಈ ಪ್ರಸ್ತಾವನೆಗೆ ಸಂಸದ ಜಗದೀಶ್ ಶೆಟ್ಟರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಂಸತ್ತಿನ ಮಳೆಗಾಲದ ಅಧಿವೇಶನ ಮುಗಿದ ತಕ್ಷಣ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಚಂದಗಡದ ಶಾಸಕ ಶಿವಾಜಿ ಪಾಟೀಲ್ ಅವರೊಂದಿಗೆ ತಿಲಾರಿ ಜಲಾಶಯ ಪ್ರದೇಶಕ್ಕೆ ಜಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬೈಟ್
ಈ ಸಭೆಯಲ್ಲಿ ನೇತಾಜೀರಾವ್ ಜಾಧವ್, ದೀಪಕ್ ವಾಘೇಲಾ, , ವಂದನಾ ಬೆಳಗುಂದಕರ್, ರೇಣು ಕಿಲ್ಲೇಕರ, ಸುಧಾ ಭಾತಕಾಂಡೆ, ಸಂಜೀವ್ ಪ್ರಭು, ಮೊಹಮ್ಮದ್ ಪೀರಜಾದೆ ಸೇರಿದಂತೆ ಇನ್ನುಳಿದ ಮಾಜಿ ನಗರಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
