42ವರ್ಷಗಳ ಕಾಲ ಭಾರತೀಯ ಮೀಸಲು ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸಿ ಕಮಾಂಡೆಂಟ್ ಹುದ್ದೆಗೇರಿ ಸೇವಾ ನಿವೃತ್ತಿಯನ್ನು ಹೊಂದಿದ ಎಸ್.ಡಿ ಪಾಟೀಲ್‍ರವರ ಬಿಳ್ಕೊಡುಗೆ ಸಮಾರಂಭ ನಡೆಯಿತು.

ವಿಜಯಪುರ ಹೊರವಲಯದಲ್ಲಿರುವ ಭಾರತೀಯ ಮೀಸಲು ಪಡೆಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಆರ್‍ಬಿ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ವಯೋನಿವೃತ್ತಿಯನ್ನು ಹೊಂದಿದ ಎಸ್.ಡಿ ಪಾಟೀಲ್‍ರವರನ್ನು ಸನ್ಮಾನಿಸಿ ಬಿಳ್ಕೊಟ್ಟರು. ಈ ವೇಳೆ ತಮ್ಮ ಸೇವಾ ಅವಧಿಯಲ್ಲಿ ಕಾರ್ಯ ನಿರ್ವಹಿಸಲು ಸಹಕರಿಸಿದ ಎಲ್ಲರನ್ನು ನೆನೆದು ಪಾಟೀಲ್ ಭಾವುಕರಾದರು.
ಈ ಸಂದರ್ಭದಲ್ಲಿ ಐಆರ್‍ಬಿ ಪಡೆಯ ಡೆಪ್ಯೂಟಿ ಕಮಾಂಡೆಂಟ್ ಜೆ. ರೂಪೇಶ್, ಸಹಾಯಕ ಕಮಾಂಡೆಂಟ್ ಗುರುನಥ, ಶರಣಬಸವ, ನಾಗೇಶ ಯರಡಾಲ್, ಲಕ್ಷ್ಮಣ್ ನಾಯಕ್, ಇನ್ಸ್‍ಪೆಕ್ಟರ್‍ಗಳಾದ ವಿಜಯ ಠಕ್ಕಣ್ಣವರ್, ಮಹಾಂತೇಶ್ ಇಟ್ಟಿ, ಪ್ರಸನ್ನ ಲಬ್ಬಾ, ಹುಸೇನ್ ಲಾಲಕೋಟಿ, ಕಲ್ಲನಗೌಡ ಪಾಟೀಲ್, ಹಾಗೂ ಸಿಬ್ಬಂದಿ ಹಾಜರಿದ್ದರು.
