ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಹಿರಿಯ ಸಮಾಜಸೇವಕರು ಪ್ರಗತಿಪರ ರೈತರಾಗಿ ಅನೇಕ ಕುಟುಂಬಗಳಿಗೆ ಸಹಾಯ ಹಸ್ತ ನೀಡಿರುವ ದಿ.ಬಂಡಾ ಚೌಗುಲೆ ಇವರ ಪ್ರಥಮ ಸ್ಮೃತಿದಿನ ನಿಮಿತ್ತ ಅಂಕಲಿಯ ಗೋಮಟೇಶ ಶಿಕ್ಷಣ ಸಂಸ್ಥೆಯ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವೈದ್ಯರು ಶಿರಗುಪ್ಪಿ ಎಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಹಮಿಕೊಂಡು ಸೇವೆ ನೀಡಿದರು.

ಶ್ರೀ ಗೊಮ್ಮಟೇಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಏನ.ಏ. ಮಗದುಮ್ ಭಾರತಿಯರು ಪ್ರಾಚೀನ ಕಾಲದಿಂದ ಸಾಧು-ಸಂತರು, ಹಿರಿಯರು, ಆಯುರ್ವೇದಿಕ್ ಚಿಕಿತ್ಸಾ ಪದ್ಧತಿ ಅಳವಡಿಸುತ್ತಿದ್ದರು. ಈಗಲೂ ಆಯುರ್ವೇದಿಕ್ ಉಪಚ್ಚಾರ ಪದ್ಧತಿ ಯಶಸ್ವಿಯಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಜಿ ಇವರು ಆಯುರ್ವೇದಿಕ ಪದ್ಧತಿ ಅಳವಡಿಸುತ್ತಾರೆ. ಯೋಗ ಪದ್ಧತಿ ಪ್ರಾರಂಭಿಸಿದ ಇಡೀ ದೇಶದಲ್ಲಿ ಹಾಗೂ ವಿಶ್ವದಲ್ಲಿ ಯೋಗಾ ಡೇ ಆಚರಿಸುತ್ತಿದ್ದಾರೆ ಇದು ಹೆಮ್ಮೆಯ ವಿಷಯ ಎಂದರು.
ಶಿರಗುಪ್ಪಿಯಲ್ಲಿ ಉಚಿತ ಉಪಚ್ಚಾರ ಶಿಬಿರ ಹಮ್ಮಿಕೊಂಡು ಅನೇಕರಿಗೆ ಉಪಚ್ಚಾರ ನೀಡಿದರು. ಶಿಬಿರದಲ್ಲಿ ಕಾಮಾಲೆ, ಪಾಶ್ರ್ವವಾಯು, ನರರೋಗ, ಚರ್ಮರೋಗ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ನೇತ್ರ ಚಿಕಿತ್ಸೆ ಸೇರಿದಂತೆ ಹಲವಾರು ಕಾಯಿಲೆಗಳ ಮೇಲೆ ಉಚಿತ ಉಪಚಾರ ನೀಡಿದರು. ಇದರ ಲಾಭ ಅನೇಕರು ಪಡೆದುಕೊಂಡಿದ್ದಾರು. ಪ್ರತಿವರ್ಷ ಉಚಿತ ಶಿಬಿರ ನೆರವೇರುವುದು ಎಂದು ಡಾ. ಏನ.ಏ. ಮಗದುಮ್ ಹೇಳಿದರು.
ಶಿರಗುಪ್ಪಿಯ ಹಿರಿಯ ವೈದ್ಯರು ಡಾ. ಬಿ.ಬಿ ಪಾಟೀಲ್ ಇವರ ಆಸ್ಪತ್ರೆಯಲ್ಲಿ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ತಜ್ಞ ವೈದ್ಯರಾದ ಅಶೋಕ ಶೆಟ್ಟಿ, ಬಸವರಾಜ ಗಂಟಿ, ಸುನಿಲ್ ಹೊನ್ನವರ್, ಡಾ. ಮೋಹನ್ ಭೋಮಾಜ್, ಡಾ. ಸಚಿನ್ ಶಿಂದೆ, ವಿವೇಕ್ ಸೋಲಾಪುರ್‍ಕರ್, ಪ್ರದೀಪ್ ಡವಳೆ, ಅಭಿಜಿತ್ ಪಾಟೀಲ್, ಸೇರಿದಂತೆ ಮಹಿಳಾ ವೈದ್ಯರು ಉಪಚಾರ ನೀಡಿದರು.
ಶಿರಗುಪ್ಪಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಾಂಜಲಿ, ಅಭಯಕುಮಾರ್ ಆಕಿವಾಟೆ, ವಿಜಯ್ಕುಮಾರ್ ಅಕ್ಕಿವಾಟೆ, ಡಾ. ಜಿತೇಂದ್ರ ಖೋತ್, ಭೀಮು ಭೋಲೆ, ಭೀಮು ಆಕಿವಾಟೆ, ಬೊಮ್ಮನ ಚೌಗುಲೆ, ಸೇರಿದಂತೆ ಅನೇಕರಿದ್ದರು. ಸುರೇಶ ಚೌಗುಲೆ ಶಬಿರದ ಬಗ್ಗೆ ಮಾಹಿತಿ ವಿವರಿಸಿದರು.