Hukkeri

ಬಡಕುಂದ್ರಿ ಹೊಳೆಮ್ಮ ದೇವಿಗೆ ಸಾಗರೋಪಾಯದಲ್ಲಿ ಬಂದ ಭಕ್ತ ಸಮೂಹ.

Share

ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೋಳೆಮ್ಮಾದೇವಿ ಜಾತ್ರೆಗೆ ಲಕ್ಷಾಂತರ ಜನರು ಆಗಮಿಸಿ ದೇವಿ ದರ್ಶನ ಪಡೆದರು.
ಹಿರಣ್ಯಕೇಶಿ ನದಿ ದಡದಲ್ಲಿ ನೆಲೆಸಿರುವ ಹೋಳೆಮ್ಮಾದೇವಿ ದೇವಿಯ ಜಾತ್ರೆಯು ಪ್ರತಿವರ್ಷ ಭಾರತ ಹುಣ್ಣಿಮೆಯಿಂದ ಒಂದು ತಿಂಗಳ ಕಾಲ ಜರಗುವ ಜಾತ್ರೆಗೆ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಭಕ್ತರು ಪ್ರತಿ ಮಂಗಳವಾರ, ಶುಕ್ರವಾರ ವಿಷೇಶ ಪೂಜಾ ವಿಧಿವಿಧಾನಗಳನ್ನು ಜರುಗಿಸಿ ನದಿ ದಡದಲ್ಲಿ ಲವನದೊಂದಿಗೆ ತೋಟ್ಟಿಲು ಪೂಜೆ ಮಾಡಿ ಹರಕೆಯನ್ನು ಸಲ್ಲಿಸುತ್ತಾರೆ,ಅದಲ್ಲದೆ ಚರ್ಮರೊಗಕ್ಕೆ ಭಂಡಾರ ಹೂ ಎರಚಿ ದೇವಿಯ ಮೊರೆ ಹೋಗುತ್ತಾರೆ.

ಜಾತ್ರೆಯಲ್ಲಿ ಮಕ್ಕಳ ಮೊಜು ಮಸ್ತಿ,ಆಟ ಉಯ್ಯಾಲೆ ಯೊಂದಿಗೆ ದಿನ ಬಳಕೆಯ ವಸ್ತುಗಳು ಮಾರಾಟ ಹಾಗೂ ಮಹಿಳೆಯರು ಬಳೆ ತೊಟ್ಟಿಕೊಳ್ಳುವದು ಸಾಮಾನ್ಯವಾಗಿತ್ತು.
ಈ ಕುರಿತು ಇನ್ ನ್ಯೂಜ ಜೋತೆ ಮಾತನಾಡಿದ ಟ್ರಸ್ಟ್ ಕಮಿಟಿ ಸದಸ್ಯ ಹಾಗೂ ಮುಖ್ಯ ಅರ್ಚಕ ಎಚ್ ಎಲ್ ಪೂಜೆರಿ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಸರ್ಕಾರದ ಆದೇಶದಂತೆ ದೇವಿಯ ದರ್ಶನ ಮತ್ತು ಜಾತ್ರೆಗಳನ್ನು ರದ್ದು ಪಡಿಸಲಾಗಿತ್ತು ಈಗ ಮತ್ತೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಾತ್ರೆಯನ್ನು ಮಾಸ್ಕ ಮತ್ತು ಸಾಮಾಜಿಕ ಅಂತರ ಹಾಗೂ ಸ್ವಚ್ಛತೆಗೆ ವಿಷೇಶ ಆದ್ಯತೆನೀಡಿ ಜಾತ್ರೆ ಮಾಡಲಾಗುತ್ತಿದೆ ಈಗಾಗಲೆ ಲಕ್ಷಾಂತರ ಜನರು ದೇವಿಯ ದರ್ಶನ ಪಡೆದುಕೊಂಡಿದ್ದಾರೆ.

ದೇವಸ್ಥಾನ್ ಆವರಣದಲ್ಲಿ ಭಕ್ತರಿಗೆ ಅನಕೂಲ ದೃಷ್ಟಿಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಕಾರಣ ಭಕ್ತರು ತನು ಮನ ಧನದಿಂದ ಆಡಳಿತ ಮಂಡಳಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಡಕುಂದ್ರಿ ಹೋಳೆಮ್ಮಾದೇವಿ ಟ್ರಸ್ಟ್ ಕಮಿಟಿ ಸದಸ್ಯರಾದ ಲಕ್ಕಪ್ಪಾ ಪೂಜೇರಿ, ಬಾಬುಗೌಡಾ ಪಾಟೀಲ, ಶಿವಾನಂದ ಪೂಜೇರಿ, ರಾಮಗೌಡಾ ಪೂಜೇರಿ, ಶಿವಾನಂದ ಮಾನಗಾಂವಿ, ವೀರಪಾಕ್ಷಿ ನಂದಗಾಂವಿ , ಎಚ್ ಎಲ್ ಪೂಜೇರಿ ಮೊದಲಾದವರು ಜಾತ್ರೆ ಯಶಸ್ವಿಗೆ ಶ್ರಮಿಸಿದರು .

Tags:

error: Content is protected !!