ಕಾಗವಾಡ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸ್ಥಾನ ನೀಡುವಂತೆ ದೆಹಲಿಯ ವರಿಷ್ಠರಿಗೆ ಈ ಹಿಂದೆಯೇ ನಾನು ಮನವಿ ಮಾಡಿಕೊಂಡು ಬಂದಿದ್ದೇನೆ. ಪಕ್ಷ ನನ್ನ ಸೇವೆ ಗಮನಿಸಿ ಮತ್ತು ಮತಕ್ಷೇತ್ರದ ಅಭಿವೃದ್ದಿಗಾಗಿ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಮಾಜಿ ಸಚಿವ ಶ್ರೀಮಂತ ಪಾಟೀಲ್ ಸ್ಪಷ್ಟಪಡಿಸಿದರು.

ಮಂಗಳವಾರ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಶ್ರೀಮಂತ ಪಾಟೀಲ್ ಕಳೆದ ಆರು ತಿಂಗಳುಗಳ ಹಿಂದೆ ನಾನು ದೆಹಲಿಗೆ ಹೋಗಿ ಬಿಜೆಪಿ ಹೈಕಮಾಂಡ ಮುಂದೆ ಸವಿಸ್ಥಾರವಾಗಿ ಮಾತನಾಡಿ ಬಂದಿದ್ದೇನೆ. ಸಚಿವ ಸ್ಥಾನ ಕೊಡುವ ಬಗ್ಗೆ ಭರವಸೆ ನೀಡಿದ್ದರು, ಕೊಟ್ಟರೆ ರಾಜ್ಯದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತೇನೆ, ಕೊಡದಿದ್ದರೆ ಕ್ಷೇತ್ರದ ಜನತೆಯ ಸೇವೆ ಮಾಡಿಕೊಂಡು ಇರುತ್ತೇನೆ ಎಂದರು.

ಇನು ಹಿಜಾಬ್ ವಿಚಾರ ಸದ್ಯ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಈ ಕುರಿತು ಎನನ್ನೂ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಮೋಳೆ ಗ್ರಾಮದ ಶಾಲಾ ಕೊಠಡಿಯನ್ನು ಶಾಸಕ ಶ್ರೀಮಂತ ಪಾಟೀಲ ಉದ್ಘಾಟಿಸಿದರು. ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಭೂತಾಳಿ ಥರಥರೆ, ಉಪಾಧ್ಯಕ್ಷೆ ಮನಿμÁ ಮುಂಜೆ, ದೀಪಕ ಪಾಟೀಲ, ಬಿಳ್ಯಾನಿ ಪುಜಾರಿ, ಸಿದ್ದು ಹವಳೆ, ಆನಂದ ಕನವಿ, ಬಾಳು ನರಟ್ಟಿ, ಬಾಬು ಮುಂಜೆ, ಉಲ್ಲಾಸ ಹರಳೆ, ಬಸು ತೇಲಿ, ದುಂಡಪ್ಪ ತುಗಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.