ಹೈಕೋರ್ಟ್ ಮಧ್ಯಂತರ ಆದೇಶಕ್ಕೆ ಬಿಡಿಗಾಸಿನ ಕಿಮ್ಮತ್ತು ಇಲ್ಲಾ ಎನ್ನುವಂತೆ ಪೆÇೀಷಕರು ಹಿಜಾಬ್ ಧರಿಸಿಯೇ ಮಕ್ಕಳನ್ನ ಶಾಲೆಗೆ ಕಳುಹಿಸಿರುವ ಘಟನೆ ವಿಜಯಪುರ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಹೌದು ವಿದ್ಯಾರ್ಥಿನಿಯರು ಅಷ್ಟೇ ಅಲ್ಲದೇ ಶಾಲೆಗೆ ಶಿಕ್ಷಕಿಯರು ಕೂಡಾ ಹಿಜಾಬ್ ಧರಿಸಿಯೇ ವಿಜಯಪುರ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗೆ ಆಗಮಿಸಿದ್ದರು. ಹಿಜಾಬ್ ಧರಿಸಿಯೇ ಪ್ರಾರ್ಥನೆಯಲ್ಲಿ ಶಿಕ್ಷಕಿಯರು, ವಿದ್ಯಾರ್ಥಿನಿಯರು ಭಾಗಿಯಾಗಿದ್ದರು. ಇμÉ್ಟ ಅಲ್ಲದೇ ಕೆಲ ವಿದ್ಯಾರ್ಥಿಗಳು ಟೋಪಿ ಧರಿಸಿ ಬಂದಿದ್ದರು. ಕೋರ್ಟ್ ಆದೇಶಕ್ಕೆ ಬಿಡಿಗಾಸಿನ ಕಿಮ್ಮತ್ತು ಇಲ್ಲ ಎಂಬಂತೆ ಶಾಲೆ ಆವರಣ ಪ್ರವೇಶಿಸಿ, ಪ್ರಾರ್ಥನೆ ನಡೆಸುವಾಗಲು ಹಿಜಾಬ್‍ನ್ನು ಶಿಕ್ಷಕಿಯರು ವಿದ್ಯಾರ್ಥಿನಿಯರು ತೆರೆಯಲಿಲ್ಲ. ಅಲ್ಲದೇ ತರಗತಿಯಲ್ಲಿ ಕೂಡಾ ಹಿಜಾಬ್ ಧರಿಸಿ ಕುಳಿತರು. ಹಿಜಾಬ್ ಧರಿಸಿ ಬರಬಾರದು ಅಂತಾ ಆರ್ಡರ್ ಬಂದಿಲ್ಲ ಎಂದ ಉರ್ದು ಶಾಲೆ ಶಿಕ್ಷಕರೊರ್ವರು ನಮಗೆ ಯಾರು ಆರ್ಡರ್ ಕೊಟ್ಟಿಲ್ಲ, ಕಾಲೇಜಲ್ಲಿ ಮಾತ್ರ ಅದು ಇದೆ, ಪ್ರೈಮರಿಗೆ ಇದು ಸಂಬಂಧ ಇಲ್ಲ ಎಂದು ಶಿಕ್ಷಕರು ವಾದಿಸಿದರು.
ಇನ್ನು ವಿಷಯ ತಿಳಿದು ಶಾಲೆಗೆ ವಿಜಯಪುರ ನಗರ ಬಿಇಓ ಎಂ.ಬಿ.ಮೊರಟಗಿ ಭೇಟಿ ನೀಡಿದರು. ತರಗತಿಗಳ ಭೇಟಿ ನೀಡಿ ವೀಕ್ಷಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇಲ್ಲಿನ ಪರಸ್ಥಿತಿ ವೀಕ್ಷಣೆ ಮಾಡಿದ್ದೇನೆ. ಡಿಡಿಪಿಐ ಅವರಿಗೆ ವರದಿ ನೀಡುತ್ತೇನೆಂದರು. ಆದ್ರೆ ಹೆಚ್ಚಿನ ಮಾಹಿತಿ ನೀಡದ ಅಧಿಕಾರಿ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ.
ಒಟ್ಟಾರೆ ಕೋರ್ಟ ಆದೇಶ ಇದ್ದರೂ ಕೂಡ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸಿದ್ರೆ ಜವಾಬ್ದಾರಿಯುತ ಶಿಕ್ಷಕರು ಕೂಡ ಹಿಜಾಬ್ ಧರಿಸಿ ಬಂದಿದ್ದು ಸಧ್ಯ ತೀವ್ರ ಟೀಕೆಗೆ ಗುರಿಯಾಗಿದೆ.