Athani

ಕ್ಷೇತ್ರ ಮರು ವಿಂಗಡಣೆ ತಿರ್ಮಾನವಾಗಿದ್ದು ಒಳ್ಳೆಯದು; ಶಾಸಕ ಲಕ್ಷ್ಮಣ್ ಸವದಿ

Share

• ಕ್ಷೇತ್ರ ಮರು ವಿಂಗಡಣೆ ಸ್ವಾಗತಿಸಿದ ಸವದಿ
• 2029 ಕ್ಕೆ ಹೊಸ ಲೋಕಸಭಾ ಚಿತ್ರಣ?
• ಮಹಿಳಾ ಮೀಸಲಾತಿಯಿಂದ ಹೆಚ್ಚಲಿದೆ ಕ್ಷೇತ್ರಗಳು
• ಎರಡು ಲಕ್ಷಕ್ಕೊಬ್ಬ ಶಾಸಕನ ಆಯ್ಕೆ ಸೂತ್ರ

ದೇಶದಲ್ಲಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಚರ್ಚೆ ಕಾವೇರಿದೆ. ಈ ಕುರಿತು ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಕ್ಷೇತ್ರ ಮರು ವಿಂಗಡಣೆಯಿಂದ ಜನಪ್ರತಿನಿಧಿಗಳಿಗೆ ಆಗುವ ಅನುಕೂಲಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ನಿರ್ಧಾರವು ಸ್ವಾಗತಾರ್ಹ ಎಂದು ಶಾಸಕ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ದಾರೆ. 2028ರ ವಿಧಾನಸಭಾ ಚುನಾವಣೆ ಮತ್ತು 2029ರ ಲೋಕಸಭಾ ಚುನಾವಣೆಗಳ ಹೊತ್ತಿಗೆ ಈ ಬದಲಾವಣೆಗಳು ಮಹತ್ವದ ಪಾತ್ರ ವಹಿಸಲಿವೆ. ಪ್ರಮುಖವಾಗಿ ಎರಡು ಲಕ್ಷ ಜನಸಂಖ್ಯೆಗೆ ಒಬ್ಬ ಶಾಸಕ ಹಾಗೂ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಒಂದು ಲೋಕಸಭಾ ಕ್ಷೇತ್ರ ಎಂಬ ಲೆಕ್ಕಾಚಾರ ಬರಲಿದ್ದು, ಇದರಿಂದ ಜನಪ್ರತಿನಿಧಿಗಳಿಗೆ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಮತ್ತು ಆಡಳಿತಾತ್ಮಕವಾಗಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
ಇದೇ ವೇಳೆ ಮಹಿಳಾ ಮೀಸಲಾತಿ ಜಾರಿಯ ಬಗ್ಗೆಯೂ ಮಾತನಾಡಿದ ಸವದಿ, 33 ಪ್ರತಿಶತ ಮಹಿಳಾ ಮೀಸಲಾತಿ ಮಸೂದೆ ಈಗಾಗಲೇ ಪಾಸಾಗಿರುವುದರಿಂದ ಸಹಜವಾಗಿಯೇ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂಬ ಮುನ್ಸೂಚನೆ ನೀಡಿದರು. ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರ ವಿರೋಧಕ್ಕೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದವರು ತಮ್ಮ ನಿಲುವಿಗೆ ತಕ್ಕಂತೆ ವಿರೋಧಿಸುವುದು ಸಹಜ. ಆದರೆ ಮಸೂದೆ ಪಾಸಾಗಿದ್ದು, ಕೇಂದ್ರ ಸರ್ಕಾರವು 31 ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಹೊಂದಿದೆ ಎಂದು ತಿಳಿಸಿದರು.

Tags:

error: Content is protected !!