Athani

ಶುಕ್ರದೆಸೆ ಆರಂಭವಾಗುತ್ತೆ ಎಂದಿದ್ದೆ…ಮಂತ್ರಿ ಆಗ್ತೀನಿ ಎಂದಿರಲಿಲ್ಲ… ಅಥಣಿಗೆ ಕೃಷಿ ಕಾಲೇಜೂ ಮಂಜೂರಾಗಿದ್ದು ಕೂಡ ಶುಕ್ರದೆಸೆಯೇ; ಶಾಸಕ ಲಕ್ಷ್ಮಣ್ ಸವದಿ

Share

ದೆಹಲಿಗೆ 40 ಶಾಸಕರ ದಂಡು ಪ್ರಸ್ಥಾನ
ಅಥಣಿ ಕೃಷಿ ಕಾಲೇಜೇ ದೊಡ್ಡ ಶುಕ್ರದೆಸೆ
ಬಾರದು ಬಪ್ಪದು; ಬಪ್ಪದು ತಪ್ಪದು
ಶಾಸಕ ಲಕ್ಷ್ಮಣ್ ಸವದಿ ಮಾರ್ಮಿಕ ನುಡಿ

ಒಂದೆಡೇ ಶಾಸಕರ ದಂಡು ಮಂತ್ರಿಗಿರಿಗಾಗಿ ದೆಹಲಿಯ ಪ್ರವಾಸ ಕೈಗೊಂಡಿದೆ. ಇನ್ನೊಂದೆಡೇ ಇದರಿಂದ ದೂರ ಉಳಿದ ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರು ಬಾರದು ಬಪ್ಪದು, ಬಪ್ಪದು ತಪ್ಪದು. ಅಥಣಿಗೆ ಕೃಷಿ ಕಾಲೇಜು ಮಂಜೂರಾಗಿದ್ದು ಸಹ ಶುಕ್ರದೆಸೆಯೇ ಎಂದಿದ್ದಾರೆ.

ಮಾಧ್ಯಮಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಮತ್ತು ಅಥಣಿಯ ಶಾಸಕ ಲಕ್ಷ್ಮಣ್ ಸವದಿ ಅವರು, 40 ಶಾಸಕರು ದೆಹಲಿಗೆ ತೆರಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಂಪುಟ ಪುನಾರಚನೆ ಮಾಡಿ ಬೇರೆಯವರಿಗೆ ಅವಕಾಶಗಳನ್ನು ನೀಡಬೇಕು. ಹೈಕಮಾಂಡ್, ಸಿಎಂ ಮತ್ತು ಪಕ್ಷದ ಅಧ್ಯಕ್ಷರು ಸರ್ಕಾರ ಸ್ಥಾಪನೆಯಾಗಿ 2 ವರೆ ವರ್ಷದ ಬಳಿಕ ಬೇರೆಯವರಿಗೆ ಅವಕಾಶ ನೀಡುವುದಾಗಿ ಮಾತು ಹೇಳಿದ್ದರು. ಈಗಾಗಲೇ 2 ವರೆ ವರ್ಷ ಮುಗಿದು ಹೋಗಿದ್ದು, ಈ ಹಿನ್ನೆಲೆ ಶಾಸಕರು ದೆಹಲಿಗೆ ತೆರಳಿ ತಮ್ಮ ಭಾವನೆಗಳನ್ನು ತಿಳಿಸುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಈಗಾಗಲೇ ಸಿಎಂ ಮತ್ತು ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡುವುದು ಮಹತ್ವದಲ್ಲ ಎಂದರು.

ಇನ್ನು ಜನವರಿಯಲ್ಲಿ ಶುಕ್ರದೆಸೆ ಆರಂಭವಾಗಲಿದೆ ಎಂದಿದ್ದ ನೀವು ಈಗ ಏಪ್ರೀಲ್ ಶುರುವಾಗಿದೆ ಎಂಬ ಪ್ರಶ್ನೆಗೆ ಶುಕ್ರದೆಸೆ ಬರುತ್ತದೆ ಎಂದಿದ್ದೇ ಅಷ್ಟೇ. ಆದರೇ ನಾನು ಮಂತ್ರಿಯಾಗ್ತೀನಿ ಎಂದು ಹೇಳಿರಲಿಲ್ಲ. ನಮ್ಮ ಕ್ಷೇತ್ರಕ್ಕೆ ಇಂದು ಅಭಿವೃದ್ಧಿ ಕೆಲಸಗಳು ಸಿಗುತ್ತಿವೆ. ಮುಖ್ಯಮಂತ್ರಿಗಳು ಕಳೆದ ಬಜೆಟ್’ನಲ್ಲಿ ಅಥಣಿ ಕ್ಷೇತ್ರಕ್ಕೆ 509 ಕೋಟಿ ರೂಪಾಯಿಯಲ್ಲಿ ಕೃಷಿ ಕಾಲೇಜು ಮಾಡಿದ್ದು ಶುಕ್ರದೆಸೆ ಅಲ್ಲವೇ ಎಂದು ಪ್ರಶ್ನಿಸಿದರು. ಒಂದು ಪಡೆಯಲೂ ಒಂದು ಕಳೆದುಕೊಳ್ಳಬೇಕಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಬಾರದು ಬಪ್ಪದು. ಬಪ್ಪದು ತಪ್ಪದು. ಬರುವುದು ಬರುತ್ತೇ ಹೋಗುವುದು ಹೋಗುತ್ತೆ ಎಂದರು.

Tags:

error: Content is protected !!