hubbali

ಮನೆಯಲ್ಲಿ ಅಕ್ರಮ ಇಸ್ಪೀಟ್ ಜೂಜಾಟ: ಪೊಲೀಸರ ಭರ್ಜರಿ ಕಾರ್ಯಾಚರಣೆ, 10 ಮಂದಿ ಆರೋಪಿಗಳು ವಶಕ್ಕೆ

Share

ಮನೆಯನ್ನೇ ಜೂಜಾಟದ ಕೇಂದ್ರವನ್ನಾಗಿ ಮಾಡಿಕೊಂಡಿದು. ಜೂಜಾಟದಲ್ಲಿ ತೊಡಗಿದ್ದ 10 ಜನರನ್ನು ಸಿಸಿಬಿ ಹಾಗೂ ಕೇಶ್ವಾಪುರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿಯ ಸುಳ್ಳ ರಸ್ತೆಯ ಪೆರ್ಲೆ ಲೇಔಟ್‌ನಲ್ಲಿರುವ ಮನೆಯೊಂದನ್ನು ಜೂಜುಕೋರರು ಇಸ್ಪೀಟ್ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಇಂದು ನಸುಕಿನ ಜಾವ ಸುಮಾರು 4 ಗಂಟೆಗೆ ದಿಢೀರ್ ದಾಳಿ ನಡೆಸಿದ್ದಾರೆ. 10 ಜನರನ್ನ ವಶಕ್ಕೆ ಪಡೆದು. 1,13800 ರೂ ನಗದು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ರಾಕೇಶ್ ಸಿಂಗನಹಳ್ಳಿ, ಮನೋಜ್ ಹರಳ್ಳಿ, ಪುನೀತ್ ಗೋಕಾಕ್, ಮಂಜು ಶಿಪ್ರಿ, ಸಾಗರ್ ಬಳ್ಳಾರಿ, ಗಣೇಶ್ ಉಪ್ಪಾರ್, ಅಣ್ಣಿಗೇರಿ, ಬಸಲಿಂಗಯ್ಯ ಹೊಂಬಾಲಿಮಠ, ವಿಜಯ ಕೋಲಾಲ ಹಾಗೂ ಹುಸೇನ್ ಸಾಬ್ ಮುಜಾವರ್ ಎಂದು ತಿಳಿದುಬಂದಿದೆ. ಈ ಕುರಿತು ಕೇಶ್ವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!