hubbali

ಆಸ್ತಿ ಜಗಳಕ್ಕೆ ಚಿಕ್ಕಪ್ಪನನ್ನೇ ಚಾಕುವಿನಿಂದ ಇರಿದು ಕೊಂದ ಅಣ್ಣನ ಮಗ

Share

ಆಸ್ತಿ ವಿಚಾರವಾಗಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, ಅಣ್ಣನ ಮಗನೇ ಚಿಕ್ಕಪ್ಪನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಳೇ ಹುಬ್ಬಳ್ಳಿಯ ಮೆಹಬೂಬ್ ನಗರ ಬಾನತಿಕಟ್ಟದಲ್ಲಿ ನಡೆದಿದೆ.

ಅನ್ವ‌ರ್ ಖಾನ್ ಪಠಾನ್ (46) ಕೊಲೆಯಾದ ವ್ಯಕ್ತಿ. ಅವರ ಅಣ್ಣ ಅಜಗ‌ರ್ ಅವರ ಪುತ್ರ ಸಿರಾಜ್ ಖಾನ್ ಪಠಾನ್ ಚಾಕುವಿನಿಂದ ಇರಿದ ಆರೋಪಿ.

ಒಂದೇ ಕಟ್ಟಡದಲ್ಲಿ ವಾಸವಿದ್ದ ಸಹೋದರರ ಕುಟುಂಬಗಳ ನಡುವೆ ಮನೆ ಪಾಲಿನ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಮಂಗಳವಾರ ಸಂಜೆ ಮನೆ ಎದುರೇ ಆರಂಭವಾದ ಜಗಳ ತಾರಕಕ್ಕೇರಿದ್ದು, ಈ ವೇಳೆ ಸಿರಾಜ್‌, ಅನ್ವ‌ರ್ ಅವರ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡ ಅನ್ವ‌ರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಮೃತಪಟ್ಟಿದ್ದಾರೆ.

ವಿಷಯ ತಿಳಿದು ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತ ಭೂಷಣ್ ಬೋರಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags:

error: Content is protected !!