ಕೃಷಿ ಸಾಲಾ ಮನ್ನಾ ಹಾಗೂ ವಿದ್ಯುತ್ ಖಾಸಗೀಕರಣ ವಿರೋಧಿಸಿ ಧಾರವಾಡದಲ್ಲಿ ಎಐಕೆಕೆಎಮ್ಎಸ್ ಸಂಘಟನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ವಿವೇಕಾನಂದ ವೃತದಲ್ಲಿ ಎಐಕೆಕೆಎಂಎಸ್ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ರೈತರು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡಿ ರೈತರು ಕಾಯ್ದೆಯನ್ನೇ ಹಿಂಪಡೆಯುವಂತೆ ಮಾಡಿದ ಐತಿಹಾಸಿಕ ದಿನವಾಗಿದ್ದು, ಈಗ ಮತ್ತೊಂದು ಐತಿಹಾಸಿಕವ ಹೋರಾಟಕ್ಕೆ ರೈತರು ಎಲ್ಲರು ಒಗ್ಗಟಾಗಿ ಮತ್ತೊಮ್ಮೆ ಹೋರಾಟ ಮಾಡಬೇಕಾಬೇಕಿದೆ. ವಿದ್ಯುತ್ ಖಾಸಗೀಕರಣ ಮಾಡಯವ ಹುನ್ನಾರ ಕೂಡಾ ಮಾಡಲಾಗುತ್ತಿದೆ, ರೈತ ಬೆಳೆಗಳಿಗೆ ಸಮರ್ಪಕ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಬರಗಾಲಗಳಿಂದ ರೈತರು ತತ್ತರಿಸಿ ಹೋಗಿದ್ದಾರೆ. ಹಾಗಾಗಿ ಈ ಸರ್ಕಾರಗಳಿಗೆ ಮತ್ತೊಂದು ರೈತರ ಹೋರಾಟದ ಕಿಚ್ಚು ಬಿಸಿ ಮುಟ್ಟು ಕೆಲಸವಾಗಬೇಕಿದೆ. ಈ ಕೂಡಲೇ ಸರ್ಕಾರಗಳು ರೈತರ ಪರ ಕಾಳಜಿ ಮಾಡಬೇಕಿದೆ. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಿದೆ ಎಂದು ಎಚ್ಚರಿಕೆ ನೀಡಿದರು.
