ಹುಕ್ಕೇರಿ ಅಕ್ಷರ ದಾಸೋಹ ಇಲಾಖೆ ಕಛೇರಿ ಮೇಲೆ ಬೆಳಗಾವಿ ಲೋಕಾಯುಕ್ತ ದಾಳಿ ನಡೆಸಿ ಅಕ್ಷರ ದಾಸೋಹ ಸಹಾಯಕ ನಿರ್ದೆಶಕಿ ಸವಿತಾ ಹಲಕಿ ಯವರನ್ನು ತಿವ್ರ ವಿಚಾರಣೆ ಗೋಳಿಸಲಾಗಿದೆ.

ಇಂದು ಮದ್ಯಾಹ್ನ ಬೆಳಗಾವಿ ಲೋಕಾಯುಕ್ತ ಪೋಲಿಸರು ಹುಕ್ಕೇರಿ ನಗರದ ತಾಲೂಕಾ ಪಂಚಾಯತ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಕ್ಷರ ದಾಸೋಹ ಇಲಾಖೆ ಕಛೇರಿಗೆ ಆಗಮಿಸಿದ ಅಧಿಕಾರಿಗಳು ಸಂಜೆಯ ವರೆಗೆ ದಾಖಲೆಗಳನ್ನು ಪರಶಿಲಿಸಿದರು.

ದೈಹಿಕ ಶಿಕ್ಷಕ ಪಿ ಎಂ ಹಜ್ಜಿ ಎಂಬುವರಿಂದ ಸವಿತಾ ಹಲಕಿ ಹಣ ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ಗೋಳಪಡಿಸಿದ್ದಾರೆ ಎನ್ನಲಾಗುತ್ತಿದೆ.
ಲೋಕಾಯುಕ್ತ ಅಧಿಕಾರಿಗಳು ಮದ್ಯಾಹ್ನ ಪ್ರವಾಸಿ ಮಂದಿರದಿಂದ ಊಟ ತರಸಿ ಕಛೇರಿಯಲ್ಲಿ ಊಟ ಮಾಡಿದ್ದಾರೆ.
ಪ್ರಕರಣದ ವಿವರಗಳು ಲೋಕಾಯುಕ್ತ ಅಧಿಕಾರಿಗಳಿಂದ ತಿಳಿಯ ಬೇಕಾಗಿದೆ.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
