Hukkeri

ಹುಕ್ಕೇರಿ : ಅಧಿಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸ ಬೇಕು – ಸಚಿವ ಸತೀಶ ಜಾರಕಿಹೋಳಿ

Share

ಹುಕ್ಕೇರಿ ತಾಲೂಕು ಪಂಚಾಯತ ಸಭಾ ಭವನದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಅದ್ಯಕ್ಷತೆಯಲ್ಲಿ ಜರುಗಿದ ವಿವಿಧ ಇಲಾಖೆಗಳ ಪ್ರಗತಿ ಪರಶಿಲನಾ ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರು ತಮ್ಮ ಸಮಸ್ಯೆಗಳ ಕುರಿತು ಸಚಿವರ ಗಮನಕ್ಕೆ ತಂದರು ,ಸಚಿವರು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸಮಸ್ಯೆ ಕುರಿತು ಪರಶಿಲನೆ ಮಾಡುವಂತೆ ಸೂಚಿಸಿದರು.

ಗ್ರಾಮ೮ಣ ಕುಡಿಯುವ ನೀರು ಸರಬರಾಜು ಇಲಾಖೆ ಕೈಕೊಂಡ ಯೋಜನೆ ಮತ್ತು ಸಮಸ್ಯೆಗಳನ್ನು ಚರ್ಚಿಸಲು ಗುತ್ತಿಗೆದಾರರೊಂದಿಗೆ ಸಭೆಗೆ ಬರಲು ಸೂಚಿಸಿದರೂ ಸಹ ಅಧಿಕಾರಿ ಅಣ್ಣಿಗೇರಿ ಮಾತ್ರ ಒಬ್ಬರೆ ಸಭೆಗೆ ಹಾಜರಾಗಿದ್ದರು .

ಮದಿಹಳ್ಳಿ ಗ್ರಾಮದ ಸರ್ವೆ ನಂಬರ 48 ರ ಎರಡು ಎಕರೆ ಜಮಿನಿನಲ್ಲಿ ಇರುವ ಸುಮಾರು 115 ಮನೆಗಳಿಗೆ ಉಪ ಗ್ರಾಮ ಮಾಡುವ ಕುರಿತು ಮತ್ತು ರಸ್ತೆ ಡಾಂಬರಿಕರಣ ಹಾಗೂ ಚರಂಡಿ ನಿರ್ಮಿಸಲು ಆಗ್ರಹಿಸಿ ಬಹುಸಾಹೆಬ ಪಾಂಡ್ರೆ ಸಚಿವರಿಗೆ ಮನವಿ ಸಲ್ಲಿಸಿದರು.
ಮೋದಗಾ ಗ್ರಾಮದ ನೂತನ ಗ್ರಾಮ ಸಹಾಯಕಿ ಯಾಗಿ ಮಯೂರಿ ಪಾಟೀಲ ಹಾಗೂ ಕ್ಷೇತ್ರದ ನೂತನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರಿಗೆ ಆದೇಶ ಪತ್ರ ನೀಡಲಾಯಿತು.

ಕೆ ಎಂ ನಾಗನೂರ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ನೇಮಕ ದಲ್ಲಿ ಅರ್ಹತೆ ಇಲ್ಲದವರಿಗೆ ಹಣ ಪಡೆದು ನೆಮಕಾತಿ ನೀಡಲಾಗಿದೆ ಎಂದು ಗ್ರಾಮದ ಪರಶುರಾಮ ನಾಯಿಕ ಸಚಿವರ ಗಮನಕ್ಕೆ ತಂದಾಗ ಕೂಡಲೇ ಸಚಿವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಶಿವಮೂರ್ತಿ ಯವರಿಗೆ ಈ ಕುರಿತು ಪರಶಿಲನೆ ಮಾಡುವಂತೆ ಸೂಚಿಸಿದರು.

ಪಾಶ್ಚಾಪೂರ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಬಸ್ಸ್ ಅನಾನೂಕೂಲತೆ ಬಗ್ಗೆ ಚರ್ಚೆ ಮಾಡುತ್ತಿರುವಾಗ ಹುಕ್ಕೇರಿ ಸಾರಿಗೆ ಘಟಕದ ವ್ಯವಸ್ಥಾಪಕ ಚೇತನ ಸಾಣಿಕೊಪ್ಪ ಸಭೆಯಲ್ಲಿ ಹಾಜರಿಲ್ಲದ ಕಾರಣ ಸಚಿವರು ಅಸಮಾಧಾನ ವ್ಯಕ್ತ ಪಡಿಸಿ ಕೂಡಲೇ ಸಭೆಗೆ ಬರುವಂತೆ ಸೂಚಿಸಿದರು ಆದರೆ ಸಭೆ ಮುಗಿದರು ಸಹ ಡಿಪೋ ಮ್ಯಾನೇಜರ್ ಸಭೆಗೆ ಬರಲಿಲ್ಲ. ಪ್ರತಿ ತಾಲೂಕಾ ಮಟ್ಟದ ಸಭೆಗಳಿಗೆ ಡಿಪೋ ಮ್ಯಾನೇಜರ್ ರವರಿಗೆ ಮಾಹಿತಿ ನೀಡಿದರು ಸಹ ಸಭೆಗೆ ಬರುವದಿಲ್ಲಾ ಎಂದು ತಾಲೂಕಾ ಪಂಚಾಯತ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.
ನಂತರ ವಿವಿಧ ಇಲಾಖೆಗಳ ಅಧಿಕಾರಿಗಳ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವ ಪಟೋಳಿ, ಕಿರಣಸಿಂಗ ರಜಪೂತ, ಜಂಗ್ಲಿಸಾಹೇಬ ನಾಯಿಕ, ಮಹಾಂತೇಶ ಮಗದುಮ್ಮ, ಮೊದಲಾದವರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!