ಸರ್ವಧರ್ಮಿಯರು ಒಂದೆ ಎಂದು ಸಾರುವ ಏಕೈಕ ಮಠ ಹುಕ್ಕೇರಿ ತಾಲೂಕಿನ ಯರನಾಳದ ಬ್ರಹ್ಮಾನಂದ ಶ್ರೀಗಳ ಕಾಳಿಕಾ ದೇವಿ ಮಠವಾಗಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.

ಕಳೆದ ಮೂರು ದಿನಗಳಿಂದ ಯರನಾಳ ಬ್ರಮ್ಮಾನಂದ ಅಜ್ಜನವರ ದಿವ್ಯ ಸಾನಿಧ್ಯದಲ್ಲಿ ಜರುಗಿದ ಮಹಾಮಾತಾ ಕಾಳಿಕಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಶಿವಾನುಭವ ಗೋಷ್ಠಿ ಯನ್ನು ಚಿಕ್ಕೋಡಿ ಶೂನ್ಯ ಸಂಪಾದನಾ ಸ್ವಾಮಿಜಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ವಿರಕ್ತ ಮಠದ ಶಿವ ಬಸವ ಮಹಾಸ್ವಾಮಿಗಳು, ಕೃಪಾನಂದ ಶ್ರೀಗಳು, ಮೂರು ಸಾವಿರ ಶಾಖಾ ಮಠದ ಪ್ರಭು ನೀಲಕಂಠ ಮಹಾಸ್ವಾಮಿಗಳು
ಮುಖಂಡರಾದ ಅರುಣ ಐಹೋಳೆ, ಸುರೇಶ ತಳವಾರ, ರಮೇಶ ಹುಂಜಿ, ಮಲ್ಲೇಶ ಚೌಗಲಾ, ಮುಕುಂದ ಮಠದ, ಶ್ರೀಶ್ರೈಲ ಮಠದ ಗುರುಗಳು, ಗೋಪಾಲ ಮಠದ ಮತ್ತು ಕೃಷ್ಣಾ ಉಪಸ್ಥಿತರಿದ್ದರು.

ಹುಕ್ಕೇರಿ ಶ್ರೀಗಳು ಮಾತನಾಡಿ ಸರ್ವಧರ್ಮದ ಕೇಂದ್ರವಾದ ಯರನಾಳ ಮಠದಲ್ಲಿ ಜಾತಿ ಮತ ಭೇಧ ವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಏಕೈಕ ಮಠ ಯರನಾಳದ ಕಾಳಿಕಾ ಮಠವಾಗಿದೆ, ದೇವಸ್ಥಾನಗಳಲ್ಲಿ ಪಂಚಾಮೃತ ಸಿಗುವ ಹಾಗೆ ಎಲ್ಲರನ್ನೂ ಸಮಾನವಾಗಿ ಕಾಣುವ ಬ್ರಹ್ಮಾನಂದ ಅಜ್ಜನವರು ನಮಗೆ ಮಾದರಿಯಾಗಿದ್ದಾರೆ ಎಂದರು

ಗಣ್ಯರು ಶ್ರೀಗಳನ್ನು ಮತ್ತು ಅತಿಥಿಗಳಿಗೆ ಸತ್ಕರುಸಿ ಅಭಿನಂದಿಸಿದರು.
ಬೆಳಗಿನ ಜಾವದಲ್ಲಿ ರಾಯಭಾಗ ಶಾಸಕ ದುರ್ಯಧನ ಐಹೋಳೆ ಮತ್ತು ಮಾಜಿ ಸಂಸದ ರಮೇಶ ಕತ್ತಿ ದೇವಿಯ ದರ್ಶನ ಪಡೆದು ಶ್ರೀಗಳಿಂದ ಆಶಿರ್ವಾದ ಪಡೆದರು. ಕಾಳಿಕಾ ದೇವಿಗೆ ಗಣಹೋಮ ಮತ್ತು ಉಡಿ ತುಂಬುವ ಕಾರ್ಯಕ್ರಮಗಳು ಜರುಗಿದವು.
ಸಾಯಂಕಾಲ ಮಹಿಳೆಯರ ಕುಂಭ ಮೇಳಗಳೊಂದಿಗೆ ರಥೋತ್ಸವ,ಪಲ್ಲಕ್ಕಿ ಉತ್ಸವ ಜರುಗಿದವು.
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಸಾವಿರಾರು ಜನ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
