ಸರ್ಕಾರಿ ಅಧಿಕಾರಿಗಳು ಕ್ರೀಡೆಯಲ್ಲಿ ಭಾಗವಹಿಸ ಬೇಕು ಎಂದು ಗೋದಾಬಾಯಿ ಕರನಿಂಗ ಫೌಂಡೆಶನ್ ಅದ್ಯಕ್ಷ ನಿಖೀಲ್ ಗಂಗರೆಡ್ಡಿ ಹೇಳಿದರು.
ಸಂಕೇಶ್ವರ ನಗರದಲ್ಲಿ ಚಿಕ್ಕೋಡಿ ಆರೋಗ್ಯ ಇಲಾಖೆ ಮತ್ತು ಗೋದಾಬಾಯಿ ಕರನಿಂಗ ಫೌಂಡೇಶನ್ ವತಿಯಿಂದ ಜರುಗಿದ ಆರೋಗ್ಯ ಇಲಾಖೆ ನೌಕರರ ಚಿಕ್ಕೋಡಿ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಟೋರ್ನಾಮೆಂಟ ಪಂದ್ಯಾವಳಿಗಳಿಗೆ ಹುಕ್ಕೇರಿ ತಾಲೂಕಾ ಆರೋಗ್ಯ ಅಧಿಕಾರಿ ಡಾ, ಮಹಾಂತೇಶ ನರಸನ್ನವರ ಚಾಲನೆ ನೀಡಿದರು.

ಕ್ರೀಡಾ ಪಟುಗಳನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಗಂಗರೆಡ್ಡಿ ಸರಕಾರಿ ಅಧಿಕಾರಿಗಳು ದಿನ ನಿತ್ಯದ ಕೆಲಸದ ಒತ್ತಡದಿಂದ ಹೋರ ಬಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢ ಹೊಂದಲು ಕ್ರೀಡೆಗಳು ಅವಶ್ಯಕ ಕಾರಣ ಪ್ರತಿ ವರ್ಷ ಸಂಕೇಶ್ವರ ನಗರದ ಗೋದಾಬಾಯಿ ಫೌಂಡೇಶನ್ ವತಿಯಿಂದ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಆಯೋಜಿಸಿ ಸ್ಪೂರ್ತಿ ನೀಡಲಾಗುತ್ತಿದೆ ಎಂದರು

ಪಂದ್ಯಾವಳಿಗಳಲ್ಲಿ ಹುಕ್ಕೇರಿ, ಸಂಕೇಶ್ವರ, ಗೋಕಾಕ, ರಾಯಭಾಗ,ಚಿಕ್ಕೋಡಿ ಸೇರಿದಂತೆ ವಿಭಾಗಿಯ ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.
ಯಕ್ಸಂಬಾ ಸರಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧೀಕಾರಿ ಡಾ, ಶಾಂತಾರಾಮ ಬಾಗೆವಾಡಿ ಯವರು ಕ್ರೀಡಾ ಪಟುಗಳಿಗೆ ಟಿ ಶರ್ಟ ವಿತರಣೆ ಮಾಡಿ ಮಾತನಾಡುತ್ತಾ ಸದಾ ಸಾರ್ವಜನಿಕ ಸೇವೆಯಲ್ಲಿ ಕೇಲಸ ಮಾಡುವ ನಮಗೆ ಚಿಕ್ಕೋಡಿ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಕ್ರೀಡೆಗಳನ್ನು ಆಯೋಜಿಸುವ ಮೂಲಕ ನಮಗೆ ದೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ ಎಂದರು

ಆರೋಗ್ಯ ಇಲಾಖೆ ಜಿಲ್ಲಾ ಕಛೇರಿ ಅಧಿಕ್ಷಕ ನವಿನ ಗಂಗರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳಿಗೆ ಸತ್ಕರಿಸಿದರು.
ಬಿ ಎ ಕುಂಬಾರ ಮಾತನಾಡಿ ಸರಕಾರಿ ನೌಕರರು ಪ್ರತಿ ದಿನ ತಮ್ಮ ಬಿಡುವಿನ ವೇಳೆಯಲ್ಲಿ ಕ್ರೀಡೆಗಳನ್ನು ಆಡುತ್ತಾ ಮಾನಸಿಕವಾಗಿ ಸಬಲರಾಗಬೇಕು ಎಂದರು
ಹುಕ್ಕೇರಿ ತಾಲೂಕಾ ಆರೋಗ್ಯ ಅಧಿಕಾರಿ ಡಾ, ಮಹಾಂತೇಶ ನರಸನ್ನವರ ಕ್ರೀಡೆಯಲ್ಲಿ ವಿಜೇತರಿಗೆ ಪಾರಿತೋಷಕ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಕಾಡಪ್ಪಾ ಕುರಬೇಟ, ಡಾ,ದತ್ತಾತ್ರಯ್ಯ ದೊಡಮನಿ, ಡಾ, ಶಾಂತಾರಾಮ ಬಾಗೆವಾಡಿ, ಉತ್ತಮಸಿಂಗ ರಜಪೂತ, ದೀಪಕ ಚಿನ್ನಾರಿ, ಡಾ, ಪ್ರಶಾಂತ ಕೊತಗಿಮಠ, ಕುಮಾರ ಚೌಗಲಾ, ವಿನಾಯಕ ಹಾಲಭಾಂವಿ, ಮಹಾವೀರ ಚೌಗಲಾ, ಸಂತೋಷ ಪಾಟೀಲ, ಮಯೂರ ಶಿಂಧೆ, ಸಂತೋಷ ಬೆಳವಿ ಮೊದಲಾದವರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ
