ತಾಲೂಕಿನ ಯಡೂರ ಟೆಕ್ ಗ್ರಾಮದ ಸಪ್ತಮಾತೃಕಾ ದೇವಿಯ ಜಾತ್ರೆ ಹಾಗೂ ನೂತನ ಮಂದಿರದ ವಾಸ್ತುಶಾಂತಿ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ಜರುಗಿತು.

ಈ ಮಂದಿರ ನಿರ್ಮಾಣಕ್ಕಾಗಿ ಶಾಸಕ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದ ೯.೫೦ ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಕೇರೂರ ಶಂಕರಲಿಂಗ ಮಠದ ಕೇದಾರಿಗೌಡ ಪಾಟೀಲ ಮತ್ತು ಪ್ರವಚನಕಾರ ಬಾಳಗೌಡ ಪಾಟೀಲ ಪಾಲ್ಗೊಂಡಿದ್ದರು.
ವೇದಿಕೆಯ ಮೇಲೆ ಶಿವಾನಂದ ಕರೋಶಿ, ಮಹೇಶ ಕಾಗವಾಡೆ, ಅಪ್ಪಾಸಾಹೇಬ ಬೆಳವಿ, ವಿಜಯ ಜಾಧವ, ಸಂಜಯ ಪಾಟೀಲ, ಜಯಪಾಲ ಬೋರಗಾವೆ, ಗೋಪಿ ಕಾಗವಾಡೆ, ಮಲ್ಲಯ್ಯ ಜಡೆ ಹಾಗೂ ವಿಜಯ ಪಾಟೀಲ ಉಪಸ್ಥಿತರಿದ್ದರು.

ಇದೇ ವೇಳೆ ಗಣ್ಯರನ್ನು ಸತ್ಕರಿಸಲಾಯಿತು ಮತ್ತು ಶಾಸಕ ಹುಕ್ಕೇರಿ ತಂದೆ-ಮಗನ ಜನಪರ ಕಾರ್ಯಗಳನ್ನು ಶ್ಲಾಘಿಸಲಾಯಿತು.
ಬೆಳಿಗ್ಗೆ ಮಂಗಳ ವಾದ್ಯಗಳ ವೈಭವದೊಂದಿಗೆ ಸುಮಂಗಲೆಯರಿಂದ ಕುಂಭಮೆರವಣಿಗೆ ನಡೆಯಿತು. ನಂತರ ದೇವಿಗೆ ವಿಧಿವತ್ತಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜೇಂದ್ರ ಹೆಬ್ಬೂರ, ಅಪ್ಪಾಸಾಹೇಬ ಕೋಳಿ, ವಿಜಯ ತಾವದಾರೆ, ಶಿವಾನಂದ ಬೆಳವಿ, ಪೋಪಟ ಕಿಲ್ಲೇದಾ,ರಾಜು ನಂದಗಾವೆ, ಸಂತೋಷ ಕೋಳಿ, ಭಾವುಸಾಹೇಬ ಬೋರಗಾವೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪೋಪಟ ಕಿಲ್ಲೇದಾರ ಸ್ವಾಗತಿಸಿದರು, ಅಪ್ಪು ಖೋತ ವಂದಿಸಿದರು. ಸಂಜೆ ಕೀರ್ತನ ಸೇವೆ ನಡೆಯಿತು.
