Belagavi

‘ಪೆರಿಯೋಕನೆಕ್ಟ್ 2026’ ಸಮ್ಮೇಳನದಲ್ಲಿ ಬೆಳಗಾವಿ ಕೆಎಲ್ಇ ದಂತ ವೈದ್ಯಕೀಯ ವಿದ್ಯಾರ್ಥಿಗಳ ಅಮೋಘ ಸಾಧನೆ!

Share

ಮೈಸೂರಿನಲ್ಲಿ ನಡೆದ ಪ್ರತಿಷ್ಠಿತ ‘ಯುಜಿ ಐಎಸ್ಪಿ ಪೆರಿಯೋಕನೆಕ್ಟ್ 2026’ ಸಮ್ಮೇಳನದಲ್ಲಿ ಬೆಳಗಾವಿಯ ಕೆಎಲ್ಇ ವಿಕೆ ದಂತ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಅಪ್ರತಿಮ ಪ್ರತಿಭೆಯ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ವೈಜ್ಞಾನಿಕ ವಿಚಾರ ಮಂಡನೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು ಹಲವು ವೈಯಕ್ತಿಕ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.

ಮೈಸೂರಿನ ಜೆಎಸ್ಎಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ಯುಜಿ ಐಎಸ್ಪಿ ಪೆರಿಯೋಕನೆಕ್ಟ್ 2026’ ಸಮ್ಮೇಳನದಲ್ಲಿ ಬೆಳಗಾವಿಯ ಕೆಎಲ್ಇ ವಿಕೆ ದಂತ ವೈದ್ಯಕೀಯ ಮಹಾವಿದ್ಯಾಲಯದ ಪದವಿ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಪ್ರಾಧ್ಯಾಪಕರಾದ ಡಾ. ಸಾಗರ್ ಜಾಲಿಹಾಳ ಮತ್ತು ಡಾ. ರೂಪಾಲಿ ಸಂಕೇಶ್ವರಿ ಅವರ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದ ಸೃಷ್ಟಿ ಅಣ್ಣಾಗೌಡ ಪಾಟೀಲ್, ಸಾರ್ದಾ ಭರತ್ ಮನಸ್ವಿ, ಕೃತಿಕಾ ಶ್ರೀನಿವಾಸನ್ ಮತ್ತು ಪರಿಧಿ ಗುಪ್ತಾ ಅವರು ವಿವಿಧ ವೈಜ್ಞಾನಿಕ ಗೋಷ್ಠಿಗಳಲ್ಲಿ ವೈಯಕ್ತಿಕ ಬಹುಮಾನಗಳನ್ನು ಗೆದ್ದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕರ ಈ ಅಮೋಘ ಸಾಧನೆಗೆ ಪ್ರಾಂಶುಪಾಲರಾದ ಡಾ. ಕಾಂತೇಶ್ವರಿ ಕುಮಟಳ್ಳಿ, ಉಪಪ್ರಾಂಶುಪಾಲರಾದ ಡಾ. ಅಂಜನಾ ಬಾಗೇವಾಡಿ ಹಾಗೂ ಡೀನ್ ಡಾ. ವಿನಾಯಕ್ ಕುಂಭೋಜಕರ್ ಅವರು ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!