ಕಲ್ಯಾಣದ ಶ್ರೇಷ್ಠ ಶರಣ ಮೇದಾರ ಕೇತಯ್ಯನವರ 896ನೇ ಜಯಂತಿ ಮಹೋತ್ಸವವು ಚಿಕ್ಕೋಡಿ ನಗರದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಿಂಚಣಿಯ ಅಲ್ಲಮಪ್ರಭು ಮಠದ ಶಿವಪ್ರಸಾದ ದೇವರು ಶರಣರ ಕಾಯಕ ತತ್ವ ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಕೆಯಾಗಬೇಕು. ಸಮಾಜವು ಶೈಕ್ಷಣಿಕ ಮತ್ತು ಆಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದಲು ಮಠದ ಸಂಪೂರ್ಣ ಸಹಕಾರವಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಬರುವ 900ನೇ ಜಯಂತಿಯನ್ನು ತಾಲೂಕೇ ತಿರುಗಿ ನೋಡುವಂತೆ ಅರ್ಥಪೂರ್ಣವಾಗಿ ಆಚರಿಸಬೇಕುಎಂದು ಕರೆ ನೀಡಿದರು.
ಪುರಸಭೆ ಸದಸ್ಯ ನಾಗರಾಜ ಮೇದಾರ ಮಾತನಾಡಿ ಇಂದಿನ ಯುವ ಪೀಳಿಗೆಗೆ ಮಠ-ಸಂಸ್ಕಾರದ ಮೌಲ್ಯಗಳನ್ನು ತಿಳಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ. ಸಮುದಾಯ ಭವನದ ಅಭಿವೃದ್ಧಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಇದಕ್ಕೂ ಮುನ್ನ ಮೇದಾರ ಭವನದಿಂದ ಆರಂಭವಾದ ಕೇತಯ್ಯನವರ ಭಾವಚಿತ್ರ ಹಾಗೂ ಮಹಿಳೆಯರ ಪೂರ್ಣಕುಂಭ ಮೆರವಣಿಗೆಯು ಸಕಲ ವಾದ್ಯಮೇಳಗಳೊಂದಿಗೆ ಅಂಕಲಿಕೂಟ, ಕೆ.ಸಿ. ರಸ್ತೆ, ಚರಮೂರ್ತಿ ಮಠ, ಡಂಬಳಕೂಟ ಹಾಗೂ ಬಸವೇಶ್ವರ ವೃತ್ತದ ಮೂಲಕ ವಿಜೃಂಭಣೆಯಿಂದ ಸಾಗಿತು.

ಈ ಸಂದರ್ಭದಲ್ಲಿ ಚಂದು ಮೇದಾರ, ಅಶೋಕ ಮೇದಾರ, ಶಂಕರ ಮೇದಾರ, ಸುರೇಶ ಮೇದಾರ, ದೀಪಕ ಬುರುಡ, ಮಾರುತಿ ಮೇದಾರ, ನಾಗೇಶ ಮೇದಾರ, ಅರ್ಜುನ ಮೇದಾರ, ಮಹೇಶ ಮೇದಾರ, ವಿನಾಯಕ ಮೇದಾರ ಸೇರಿದಂತೆ ಚಿಕ್ಕೋಡಿ, ನವನ್ಯಾಳ, ಬಡಕುಂದ್ರಿ ಹಾಗೂ ಅಂಕಲಿ ಗ್ರಾಮಗಳ ಸಮಾಜ ಬಾಂಧವರು ಉಪಸ್ಥಿತರಿದ್ದರು.x
