Vijaypura

ಟಿಪ್ಪು ಸುಲ್ತಾನ್ ವೇಷ ಧರಿಸಿ, ಖಡ್ಗ ಹಿಡಿದು ಪೋಸ್ ನೀಡಿದವರೇ ಈಗ ಅವರ ವಿರುದ್ಧ ಮಾತನಾಡುತ್ತಿದ್ದಾರೆ: ಸಚಿವ ವಿಜಯಾನಂದ ಕಾಶಪ್ಪನವರ ವಾಗ್ದಾಳಿ

Share

ಹಜರತ್ ಟಿಪ್ಪು ಸುಲ್ತಾನ್ ಅವರ ವೀರತನ ಮತ್ತು ಶೌರ್ಯವನ್ನು ಸಹಿಸಿಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಹಿಂದೆ ಬೇಕಾದಾಗ ಟಿಪ್ಪು ಸುಲ್ತಾನ್ ಅವರ ವೇಷ ಧರಿಸಿ, ತಲವಾರು ಹಾಗೂ ಖಡ್ಗ ಹಿಡಿದು ಪೋಸ್ ನೀಡುತ್ತಿದ್ದವರೇ ಇಂದು ಅವರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಸಚಿವ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದರು.

ಅವರು ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಹಜರತ್ ಟಿಪ್ಪು ಸುಲ್ತಾನ್ ರಕ್ಷಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಪರೋಕ್ಷವಾಗಿ ಟೀಕಿಸಿದರು. ಇದೇ ವೇಳೆ ವಿಜಯಪುರದ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿ, ವಿಜಯಪುರದಲ್ಲಿ ಇರುವುದು ಹುಚ್ಚು ನಾಯಿಯಲ್ಲ, ಗೊಡ್ಡೆಮ್ಮೆ ಎಂದು ವ್ಯಂಗ್ಯವಾಡಿದರು. ವಿಧಾನ ಸೌಧದಲ್ಲಿ ಈ ಹಿಂದೆ 6ನೇ ನಂಬರ್ ಸೀಟ್ ಇತ್ತು. ಇದೀಗ 224ನೇ ನಂಬರ್ ಸೀಟ್‌ಗೆ ಬಂದಿದೆ. ಇನ್ನೂ 18 ತಿಂಗಳ ನಂತರ ಅದೂ ಹೋಗಲಿದೆ ಎಂದು ಹೇಳುವ ಮೂಲಕ ರಾಜಕೀಯವಾಗಿ ಮತ್ತೊಂದು ಚಾಟಿ ಬೀಸಿದರು.

Tags:

error: Content is protected !!