ಖಾನಾಪೂರ ತಾಲೂಕಿನ ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬಂದು, ಊರಿನ ಹೆಸರನ್ನು ಅಜರಾಮರವಾಗಿಸಲು ಯುವಕರು ಕ್ರೀಡೆಯಲ್ಲಿ ಆಸಕ್ತಿ ತೋರಬೇಕು ಎಂದು ತಾಲೂಕಾ ಮಾರ್ಕೆಟಿಂಗ್ ಸೊಸೈಟಿ ನಿರ್ದೇಶಕ ರಫೀಕ್ ಹಲಶೀಕರ ಹೇಳಿದ್ದಾರೆ. ಇದಕ್ಕೆ ತಾವು ಎಲ್ಲ ರೀತಿಯ ಸಹಕಾರ ನೀಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.
ಖಾನಾಪೂರ ತಾಲೂಕಿನ ಘೋಟಗಾಳಿ ಗ್ರಾಮದ ಯುವಕರು ಆಯೋಜಿಸಿದ್ದ ಹಾಫ್ ಪಿಚ್ ಕ್ರಿಕೆಟ್ ಪಂದ್ಯಾವಳಿಯನ್ನು ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕ ರಫೀಕ್ ಹಲಶೀಕರ ಅವರು ದೀಪ ಪ್ರಜ್ವಲಿಸಿ ಹಾಗೂ ಕ್ರಿಕೆಟ್ ಮೈದಾನದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಯುವಕರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು, ಗ್ರಾಮೀಣ ಪ್ರತಿಭೆಗಳಿಂದಲೇ ಗ್ರಾಮಗಳು ಹೆಸರುವಾಸಿಯಾಗಬೇಕು ಹಾಗೂ ಪ್ರತಿಭೆಯ ಮೂಲಕ ಊರಿನ ಹೆಸರನ್ನು ಅಜರಾಮರವಾಗಿಸಲು ತಾವು ಎಲ್ಲ ತರಹದ ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದರು; ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.
