ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಚಾಚಾ ನೆಹರೂ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಪುಟಾಣಿಗಳು ನೆಹರೂ ವೇಷ ಧರಿಸಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಖಾನಾಪುರ ತಾಲೂಕಿನ ನಂದಗಡ ಗ್ರಾಮದ ವಾರ್ಡ್ ನಂಬರ್ 4ರ 190ನೇ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕಿ ರವೀಣಾ ಅವರ ಮಾರ್ಗದರ್ಶನದಲ್ಲಿ ಮಕ್ಕಳ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು. ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಹುಟ್ಟುಹಬ್ಬದ ನಿಮಿತ್ಯ ಮುದ್ದು ಮಕ್ಕಳಿಗೆ ಅವರ ಜೀವನದ ಕುರಿತು ಮಾಹಿತಿ ನೀಡಿ ಗೌರವಿಸಲಾಯಿತು. ತದನಂತರ ಮಕ್ಕಳಿಗೆ ನೃತ್ಯ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಮನರಂಜನೆ ನೀಡಿ ಪ್ರೋತ್ಸಾಹಿಸಲಾಯಿತು. ಚಾಚಾ ನೆಹರೂ ಅವರಂತೆ ಬಿಳಿ ನಿಲುವಂಗಿ ಹಾಗೂ ಗುಲಾಬಿ ಹೂವಿನ ವೇಷ ಧರಿಸಿ ಬಂದ ಮಕ್ಕಳು ಕೇಂದ್ರದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಅಪಾರ ಸಂತಸ ವ್ಯಕ್ತಪಡಿಸಿದರು. ಈ ಸುಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಮಕ್ಕಳ ಪಾಲಕರು ಉಪಸ್ಥಿತರಿದ್ದು ಮಕ್ಕಳ ಖಷಿಯಲ್ಲಿ ಭಾಗಿಯಾದರು.
