Khanapur

ಖಾನಾಪೂರದ ಆಶ್ರಯ ಕಾಲನಿಯಲ್ಲಿ ಮನೆ ಕಳ್ಳತನ; ಚಿನ್ನ, ಬೆಳ್ಳಿ ಹಾಗೂ ನಗದು ದೋಚಿದ ಕಳ್ಳರ

Share

ಖಾನಾಪೂರ ಪಟ್ಟಣದ ನಗರದ ಬಹಾರ್ ಗಲ್ಲಿ ಪ್ರದೇಶದ ಆಶ್ರಯ ಕಾಲೋನಿಯಲ್ಲಿ ಗುರುವಾರ ಮಧ್ಯರಾತ್ರಿ ಮನೆಯ ಬೀಗ ಮುರಿದು ಕಳ್ಳತನ ಮಾಡಿದ ಘಟನೆ ನಡೆದಿದೆ. ರಾಜು ಭೋಸಲೆ ಅವರ ಮನೆಗೆ ಕಳ್ಳರು ಪ್ರವೇಶಿಸಿ, ಕಪಾಟನ್ನು ಒಡೆದು ಅಂದಾಜು 2 ರಿಂದ 2.5 ತೊಲ ಚಿನ್ನ, 10 ತೊಲ ಬೆಳ್ಳಿಯ ವಸ್ತುಗಳು ಹಾಗೂ ಸುಮಾರು 2 ರಿಂದ 3 ಸಾವಿರ ರೂಪಾಯಿ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಕಳ್ಳತನದಿಂದ ಭೋಸಲೆ ಕುಟುಂಬಕ್ಕೆ ಸುಮಾರು 2.5 ರಿಂದ 3 ಲಕ್ಷ ರೂಪಾಯಿಗಳ ಆರ್ಥಿಕ ನಷ್ಟ ಉಂಟಾಗಿದೆ. ಈ ಘಟನೆಯ ಕುರಿತು ಖಾನಾಪೂರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಕಳ್ಳರ ಪತ್ತೆಗಾಗಿ ಬೆಳಗಾವಿಯಿಂದ ಶ್ವಾನದಳವನ್ನು ಕರೆಸಲಾಗಿದ್ದು, ತನಿಖೆ ಮುಂದುವರಿದಿದೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿದೆನೆಂದರೆ, ಬಹಾರ್ ಗಲ್ಲಿಯ ಸಮೀಪದ ಆಶ್ರಯ ಕಾಲನಿಯಲ್ಲಿ ರಾಜು ಭೋಸಲೆ ಅವರ ಎರಡು ಅಂತಸ್ತಿನ ಮನೆ ಇದೆ. ಮನೆಯ ಕೆಳ ಅಂತಸ್ತಿನಲ್ಲಿ ಅವರ ತಾಯಿ ವಾಸವಾಗಿದ್ದು, ಮೇಲಿನ ಅಂತಸ್ತಿನಲ್ಲಿ ರಾಜು ಭೋಸಲೆ ಹಾಗೂ ಅವರ ಪತ್ನಿ ವಾಸಿಸುತ್ತಿದ್ದಾರೆ. ಭೋಸಲೆ ಅವರ ತಾಯಿ ಮನೆಯ ಬೀಗ ಹಾಕಿಕೊಂಡು ಊರಿಗೆ ತೆರಳಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿದ್ದಾರೆ.

ಮನೆಯಲ್ಲಿದ್ದ ಕಪಾಟನ್ನು ಒಡೆದು ಅದರಲ್ಲಿದ್ದ ಒಂದೂವರೆ ತೊಲ ಚಿನ್ನದ ಆಭರಣಗಳು, ಹತ್ತು ತೊಲ ಬೆಳ್ಳಿಯ ವಸ್ತುಗಳು ಹಾಗೂ ಮನೆಯಲ್ಲಿ ಇಟ್ಟಿದ್ದ ಎರಡು ರಿಂದ ಮೂರು ಸಾವಿರ ರೂಪಾಯಿ ನಗದು ಹಣವನ್ನು ಕಳ್ಳರು ದೋಚಿದ್ದಾರೆ. ಇದೇ ವೇಳೆ ಮನೆಯ ಮತ್ತೊಂದು ಸ್ಥಳದಲ್ಲಿ ಇಟ್ಟಿದ್ದ ಚಿನ್ನದ ಹಾರ ಕಳ್ಳರ ಕೈಗೆ ಸಿಗದ ಕಾರಣ ಭೋಸಲೆ ಕುಟುಂಬದವರಿಗೆ ಹೆಚ್ಚಿನ ನಷ್ಟವಾಗುವುದು ತಪ್ಪಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಖಾನಾಪೂರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನದ ತನಿಖೆಗಾಗಿ ಬೆಳಗಾವಿಯಿಂದ ಶ್ವಾನ ದಳವನ್ನು ಕರೆಸಲಾಗಿದೆ. ಶ್ವಾನ ದಳದ ತನಿಖೆಯ ಬಳಿಕ ಕಳ್ಳತನದ ಕುರಿತು ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆ ಇದೆ. ಈ ಘಟನೆಯಿಂದಾಗಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!