Bailahongala

ತಿಗಡಿಯಲ್ಲಿ ರೈತರ ಒಗ್ಗಟ್ಟಿಗೆ ಹೊಸ ಶಕ್ತಿ… ರೈತರ ಹಕ್ಕುಗಳ ರಕ್ಷಣೆಗೆ ನೂತನ ಸಂಘಟನೆ ಅಸ್ತಿತ್ವಕ್ಕೆ!

Share

ರೈತರ ಹಕ್ಕುಗಳ ರಕ್ಷಣೆ, ರೈತರಿಗೆ ಆಗುವ ಅನ್ಯಾಯ ತಡೆ ಹಾಗೂ ಕೃಷಿ ಸೌಲಭ್ಯಗಳನ್ನು ದೊರಕಿಸಿಕೊಡುವ ಉದ್ದೇಶದಿಂದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ನೂತನ ರೈತ ಸಂಘಟನೆಯನ್ನು ಉದ್ಘಾಟಿಸಲಾಯಿತು.

ತಿಗಡಿ ಗ್ರಾಮದಲ್ಲಿ ಸುಮಾರು 50ರಿಂದ 60ಕ್ಕೂ ಹೆಚ್ಚು ರೈತರ ಸಮ್ಮುಖದಲ್ಲಿ ನೂತನ ರೈತ ಸಂಘಟನೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ದೀಪ ಬೆಳಗಿಸಿ, ನಾಮಫಲಕಕ್ಕೆ ರಿಬ್ಬನ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರೈತ ಗೀತೆಯ ಗಾಯನದೊಂದಿಗೆ ಸ್ವಾಮೀಜಿಗಳಿಂದ ರೈತರಿಗೆ ಹಸಿರು ಶಾಲು ಹೊದಿಸಿ ದೀಕ್ಷೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ರೈತ ಮುಖಂಡರು, ರೈತರಿಗೆ ಆಗುವ ಅನ್ಯಾಯವನ್ನು ತಡೆಯಲು ಗ್ರಾಮಮಟ್ಟದಲ್ಲಿ ಸಂಘಟನೆಗಳು ಬಲಗೊಳ್ಳಬೇಕು. ಸಂಘಟನೆ ಸ್ಥಾಪಿಸುವುದಷ್ಟೇ ಅಲ್ಲ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಸರ್ಕಾರದ ಯೋಜನೆಗಳು ಅರ್ಹ ರೈತರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪರಮಪೂಜ್ಯ ವೀರೇಶ್ವರ ಮಹಾಸ್ವಾಮಿಗಳು, ಶ್ರೀ ಕೃಷ್ಣಪ್ಪ ಮಹಾರಾಜರು, ಮಾತೋಶ್ರೀ ಶಿವಯೋಗಿನಿ ದೇವಿ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಒಕ್ಕೂಟದ ಅಧ್ಯಕ್ಷರಾದ ಬೀರಪ್ಪ ದೇಶನೂರ, ಕಾರ್ಯಾಧ್ಯಕ್ಷರಾದ ಬಸನಗೌಡ ಪಾಟೀಲ್ ಹಾಗೂ ವಿವಿಧ ರೈತ ಮುಖಂಡರು ಭಾಗವಹಿಸಿದ್ದರು.ತಿಗಡಿ ಗ್ರಾಮದ ನೂತನ ರೈತ ಸಂಘದ ಅಧ್ಯಕ್ಷರಾದ ಅಡಿವೆಪ್ಪ ದಳವಾಯಿ, ಉಪಾಧ್ಯಕ್ಷರಾದ ಸೋಮಲಿಂಗ ಮುದ್ದಣ್ಣವರ ಸೇರಿದಂತೆ ಗ್ರಾಮದ ರೈತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!