Bailahongala

ಬೆಳಗಾವಿ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭೀಕರ ಬಸ್ ಅಪಘಾತ; 37 ಪ್ರಯಾಣಿಕರು ಸೇಫ್!

Share

ಬೆಳಗಾವಿ, ಬೈಲಹೊಂಗಲ ಮಾರ್ಗದ ಬಡೆಕೊಳ್ಳಮಠ ಕ್ರಾಸ್ ಬಳಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಮುಂದಿನ ಟೈರ್ ಬ್ಲಾಸ್ಟ್ ಆಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅಪಘಾತ ತಪ್ಪಿದೆ.

KA 22F1946 ಸಂಖ್ಯೆಯ ಬಸ್ಸಿನ ಮುಂದಿನ ಬಲಭಾಗದ ಟೈರ್ ಬ್ಲಾಸ್ಟ್ ಆಗಿ ಬಸ್ ರಸ್ತೆ ವಿಭಜಕದ ಕಡೆಗೆ ಚಲಿಸಿತು. ಈ ವೇಳೆ ಚಾಲಕ ಬಿ.ಎಸ್. ಪತ್ರಿಮಠ ಬಸ್ಸನ್ನು ನಿಯಂತ್ರಣಕ್ಕೆ ತಂದು ಪಲ್ಟಿಯಾಗುವುದನ್ನು ತಪ್ಪಿಸಿದರು. ಇದರಿಂದ ಬಸ್ಸಿನಲ್ಲಿದ್ದ 37 ಪ್ರಯಾಣಿಕರು ಹಾಗೂ ನಿರ್ವಾಹಕ ಜಿ.ಯು. ವಿಭೂತಿ ಸುರಕ್ಷಿತವಾಗಿದ್ದಾರೆ.
ಚಾಲಕನ ಧೈರ್ಯ ಮತ್ತು ಚಾಲನಾ ಕೌಶಲ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾರ್ವಜನಿಕ ಸಾರಿಗೆ ಬಸ್ಸುಗಳ ಟೈರ್‌ಗಳ ಸುರಕ್ಷತಾ ಪರಿಶೀಲನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಚಾಲಕನ ಕರ್ತವ್ಯನಿಷ್ಠೆಯನ್ನು ಸಂಸ್ಥೆ ಗುರುತಿಸಿ ಗೌರವಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ.

Tags:

error: Content is protected !!