ಕಬ್ಬಿನ ಎಂಎಸ್ಪಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸ ಚಲೋ ಪಾದಯಾತ್ರೆಯು ಇಂದು ಧಾರವಾಡ ಜಿಲ್ಲೆ ಪ್ರವೇಶ ಮಾಡಲಿದ್ದು, ಈ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಆರ್ ಸ್ನೇಹಲ್ ಅವರು ಧಾರವಾಡ ಖಾಸಗಿ ಹೋಟೆಲ್ನಲ್ಲಿ ರೈತ ಮುಖಂಡರ ಸಭೆ ನಡೆಸಿ ಹೋರಾಟದ ಕುರಿತು ವಿವರವಾದ ಮಾಹಿತಿ ಪಡೆದುಕೊಂಡರು.
ಧಾರವಾಡ ಯರಿಕೊಪ್ಪದ ರಾಷ್ಟ್ರೀಯ ಹೆದ್ದಾರಿ ಬಳಿಯ ಖಾಸಗಿ ಹೋಟೇಲ್ನಲ್ಲಿ ಈ ಸಭೆ ನಡೆದಿದ್ದು, ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆ ಮುಖಂಡ ಚೂನ್ನಪ್ಪ ಪೂಜಾರಿ ಸೇರಿ ಹಲವು ಮುಖಂಡರ ಜತೆಗೆ ಧಾರವಾಡ ಜಿಲ್ಲಾಧಿಕಾರಿ ಆರ್ ಸ್ನೇಹಲ್ ಸಭೆ ಮಾಡಿದರು. ಸಭೆಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗುವ ಸಂಖ್ಯೆ, ಸೇರಿ ಕಾರ್ಯತಂತ್ರಗಳ ಕುರಿತು ಮಾಹಿತಿ ಪಡೆದುಕೊಂಡು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರೈತರು ಪ್ರತಿಭಟನೆಯಲ್ಲಿ ಎಷ್ಟು ಜನ ಭಾಗಿಯಾಗುತ್ತಾರೆ, ಎನ್ನೆಲ್ಲ ಸಮಸ್ಯೆ ವ್ಯವಸ್ಥೆ ಸೇರಿ ಪೊಲೀಸ್ ಬಿಗಿ ಭದ್ರತೆ ಕುರಿತುಮಾಹಿತಿ ಮಾಡಿಕೊಳ್ಳಾಗಿದೆ ಎಂದರು.
ಬೈಟ್ ಆರ್ ಸ್ನೇಹಲ್ ಧಾರವಾಡ ಡಿಸಿ.
